alex Certify ಬಿಲ್ಡರ್​ ಮಾಡಿದ ಅಚಾತುರ್ಯಕ್ಕೆ ಭಾರೀ ದಂಡ ತೆತ್ತ ಮನೆ ಮಾಲೀಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಲ್ಡರ್​ ಮಾಡಿದ ಅಚಾತುರ್ಯಕ್ಕೆ ಭಾರೀ ದಂಡ ತೆತ್ತ ಮನೆ ಮಾಲೀಕ..!

ಭಾರತೀಯ ಮೂಲದ ದೀಪಕ್​ ಲಾಲ್​ ಎಂಬ ಹೆಸರಿನ ವ್ಯಕ್ತಿ ತಾವು ವರ್ಷಪೂರ್ತಿ ದುಡಿದು ಕೂಡಿಟ್ಟ ಹಣದಲ್ಲಿ ಭರ್ಜರಿ ಮನೆಯೊಂದನ್ನ ಕಟ್ಟಿಸಿದ್ದರು. ಆದರೆ ಇದೀಗ ಈ ಮನೆ ಕಟ್ಟಿಸಿದ ತಪ್ಪಿಗೆ ಬರೋಬ್ಬರಿ 1 ಕೋಟಿ ರೂಪಾಯಿ ದಂಡ ಕಟ್ಟುವಂತಾಗಿದೆ..!
ಮನೆ ಕಟ್ಟಿಸುವಾಗ ಬಿಲ್ಡರ್​ ಮಾಡಿದ ಅಚಾತುರ್ಯದಿಂದಾಗಿ ಇದೀಗ ದೀಪಕ್​ ಲಾಲ್​ ಭಾರೀ ಮೊತ್ತದ ದಂಡ ತೆರುವಂತಾಗಿದೆ.

ಕಳೆದ ವರ್ಷ ದೀಪಕ್​ ಲಾಲ್​ ಪಾಪಕುರಾ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಲಿಕ್ಕಾಗಿ ಪಿನಾಕಲ್​ ಹೋಮ್ಸ್ ಎಂಬ ಕಂಪನಿಯನ್ನ ಸಂಪರ್ಕಿಸಿದ್ದರು. 2020ರಲ್ಲೇ ಈ ಮನೆ ನಿರ್ಮಾಣ ಕಾರ್ಯ ಅರ್ಧದಷ್ಟು ಮುಗಿದಿತ್ತು. ಇನ್ನೇನು ಈ ಮನೆ ಸಂಪೂರ್ಣವಾಗಿ ತಯಾರಾಯ್ತು ಅನ್ನೋವಷ್ಟರಲ್ಲಿ ಅಚಾತುರ್ಯವೊಂದು ಬೆಳಕಿಗೆ ಬಂದಿದೆ.

ಸೋಫಾ ಮಾರಿದ್ದ ಮಹಿಳೆಗೆ ಬಳಿಕ ಕಾದಿತ್ತು ಭರ್ಜರಿ ಶಾಕ್.​..!

ಮನೆಯನ್ನ ಕಟ್ಟುವ ಭರದಲ್ಲಿ ಬಿಲ್ಡರ್​ ಮನೆಯ ಮೂರು ಮಲಗುವ ಕೋಣೆಗಳನ್ನ ಪಕ್ಕದ ಮನೆಯ ಜಾಗದಲ್ಲಿ ಕಟ್ಟಿದ್ದಾರೆ. ಇದೊಂದು ಸಿ 94 ಡೆವಲಪ್​ಮೆಂಟ್​ ಎಂಬ ಕಂಪನಿಗೆ ಸೇರಿದ್ದು ಒಂದೋ ಮೂರು ಕೊಠಡಿಗಳನ್ನ ನೆಲಸಮ ಮಾಡಿ ಇಲ್ಲವೇ ಹಣ ಪಾವತಿ ಮಾಡಿ ಎಂದು ಹೇಳಿದೆ. ಬಿಲ್ಡರ್​ನ ಈ ಎಡವಟ್ಟಿನಿಂದಾಗಿ ದೀಪಕ್​ ಲಾಲ್​​ ಭಾರೀ ಮೊತ್ತದ ದಂಡ ತೆರುವಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...