alex Certify ಮೊಬೈಲ್​ ಚಾರ್ಜ್ ಆಗ್ತಿಲ್ಲವೆಂಬ ಕಾರಣಕ್ಕೆ ಮಾರ್ಗಮಧ್ಯದಿಂದಲೇ ವಿಮಾನ ವಾಪಾಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್​ ಚಾರ್ಜ್ ಆಗ್ತಿಲ್ಲವೆಂಬ ಕಾರಣಕ್ಕೆ ಮಾರ್ಗಮಧ್ಯದಿಂದಲೇ ವಿಮಾನ ವಾಪಾಸ್..!

ಅಮೆರಿಕ ಏರ್​ಲೈನ್ಸ್​​ ವಿಮಾನದಲ್ಲಿ ಟೋಕಿಯೋದಿಂದ ಡಲ್ಲಾಸ್​ಗೆ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ತನ್ನ ಮೊಬೈಲ್​ ಫೋನ್​ ಚಾರ್ಜ್​ ಆಗೋದನ್ನ ನಿಲ್ಲಿಸಿದೆ ಎಂಬ ಕಾರಣಕ್ಕೆ ವಿಮಾನವನ್ನೇ ಹಿಂತಿರುಗುವಂತೆ ಮಾಡಿದ್ದಾಳೆ. ಕಳೆದ ವಾರ ಈ ಘಟನೆ ನಡೆದಿದ್ದು ಈ ಅಶಿಸ್ತಿನ ಪ್ರಯಾಣಿಕೆ ಇದೀಗ ಫೆಡರಲ್​ ಆರೋಪ ಎದುರಿಸುತ್ತಿದ್ದಾಳೆ.

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: BPL ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೂ ರೇಷನ್ ವಿತರಣೆ

26 ವರ್ಷದ ವಾಲ್ಕಾ ಸುಜುಕಿ ಎಂಬಾಕೆ ತನ್ನ ಸೀಟಿನಲ್ಲಿ ಚಾರ್ಜರ್​ ಕೆಲಸ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಗರಂ ಆಗಿದ್ದಳು. ಈಕೆ ವಿಮಾನಯಾನ ಸಿಬ್ಬಂದಿ ಬಳಿ ತನ್ನ ಫೋನ್​ ಚಾರ್ಜ್​ ಆಗುತ್ತಿಲ್ಲ ಎಂದು ಹೇಳಿದ್ದಾಳೆ. ಅಲ್ಲದೇ ಈ ಕಾರಣಕ್ಕೆ ಭಾರೀ ಸಿಟ್ಟಾಗಿದ್ದ ವಾಲ್ಗಾ ವಿಮಾನದಲ್ಲಿ ರಂಪಾಟವನ್ನೇ ಮಾಡಿದ್ದಾಳೆ.

ಗಮನಿಸಿ…! ಬ್ಯಾಂಕ್, LIC ವ್ಯವಹಾರದ ವೇಳೆ ಬದಲಾವಣೆ: ಬೆಳಗ್ಗೆ 8 ರಿಂದ 12 ಗಂಟೆಗೆ ಸಮಯ ನಿಗದಿ

ವಿಮಾನದ ಮುಂಭಾಗದ ಕಡೆಗೆ ಓಡಿದ ಸುಜುಕಿ ಸಿಬ್ಬಂದಿಯನ್ನ ಬದಿಗೆ ಸರಿಸಿ ಕಾಕ್​ಪಿಟ್​ ಬಾಗಿಲನ್ನ ಬಡಿದು ತನ್ನ ಫೋನ್​ ಚಾರ್ಜ್ ಆಗುತ್ತಿಲ್ಲ ಎಂದು ಹೇಳಿದ್ದಾಳೆ. ವಿಮಾನಯಾನ ಸಿಬ್ಬಂದಿಗೆ ಯುವತಿಯನ್ನ ಶಾಂತಗೊಳಿಸಲು ಯತ್ನಿಸಿದ್ರೂ ಸಹ ಆಕೆ ಮಾತ್ರ ಕಿರುಚಾಡೋದನ್ನ ಮುಂದುವರಿಸಿದ್ದಾಳೆ. ಈ ಕಾರಣದಿಂದಾಗಿ ವಿಮಾನವನ್ನ ಹಿಂತಿರುಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಗಲಾಟೆ ವೇಳೆ ಸುಜುಕಿ ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...