alex Certify ಕೊರೊನಾ ಲಸಿಕೆ ಹಾಕಿಸಿಕೊಂಡ್ರೆ ಬಿಯರ್ ಉಚಿತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಹಾಕಿಸಿಕೊಂಡ್ರೆ ಬಿಯರ್ ಉಚಿತ….!

ಕೊರೊನಾ ಹಾಕಿಸಿಕೊಳ್ಳಿ, ಉಚಿತ ಬಿಯರ್ ಪಡೆಯಿರಿ..! ಈ ಆಫರ್ ಯಾರು ಬಿಡ್ತಾರೆ ಸ್ವಾಮಿ. ಆಫರ್ ನೀಡ್ತಿರುವ ಬಿಯರ್ ಕಂಪನಿ ಮುಂದೆ ಈಗ ದೊಡ್ಡ ಕ್ಯೂ ಇದೆ. ನೀವು ಬಿಯರ್ ಗಾಗಿ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ರೆ ನಿಮಗೊಂದು ಬೇಸರದ ಸುದ್ದಿಯಿದೆ. ಬಿಯರ್ ಉಚಿತವಾಗಿ ಸಿಗ್ತಿರೋದು ಭಾರತದಲ್ಲಿ ಅಲ್ಲ. ಅಮೆರಿಕಾರದಲ್ಲಿ.

ಸ್ಯಾಮ್ಯುಯೆಲ್ ಆಡಮ್ಸ್ ಬಿಯರ್ ಎಂಬ ಕಂಪನಿಯು ಅಮೆರಿಕದ ಓಹಿಯೋದಲ್ಲಿ ಲಸಿಕೆ ಬದಲು ಬಿಯರ್ ನೀಡಲು ಮುಂದಾಗಿದೆ. ವ್ಯಾಕ್ಸಿನೇಷನ್ ನಂತರ ಪಡೆದ ಪ್ರಮಾಣಪತ್ರವನ್ನು ತೋರಿಸಿದ್ರೆ ಬಿಯರ್ ಉಚಿತವಾಗಿ ಸಿಗಲಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ಲಸಿಕೆ ತೆಗೆದುಕೊಳ್ಳಲು ಈಗಲೂ ಅನೇಕರು ಭಯಪಡುತ್ತಿದ್ದಾರೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಭಾರತ ಸೇರಿದಂತೆ ಎಲ್ಲ ದೇಶಗಳ ಸರ್ಕಾರ ಮನವಿ ಮಾಡ್ತಿದೆ.

ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಜನರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಡಮ್ಸ್ ಬಿಯರ್ ಕಂಪನಿ ಈ ಆಫರ್ ನೀಡ್ತಿದೆ. ಇಷ್ಟೇ ಅಲ್ಲ ಡೋನಟ್ ಕಂಪನಿಯೊಂದು ಲಸಿಕೆ ಹಾಕಿಸಿಕೊಂಡವರಿಗೆ ಡೋನಟ್ ಉಚಿತವಾಗಿ ನೀಡ್ತಿದೆ. ಮತ್ತೊಂದು ಕಂಪನಿ ಗಾಂಜಾ ನೀಡ್ತಿದೆ.

ಚೀನಾದಲ್ಲಿ ಲಸಿಕೆ ನಂತ್ರ ಉಚಿತ ಐಸ್ ಕ್ರೀಂ ನೀಡಲಾಗ್ತಿದೆ. ಕೆಲ ಲಸಿಕಾ ಕೇಂದ್ರಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗ್ತಿದೆ. ಈ ಎಲ್ಲ ಆಫರ್ ಜನರ ಗಮನ ಸೆಳೆದಿದೆ. ಲಸಿಕೆ ಕೇಂದ್ರಗಳಲ್ಲಿ ಜನರ ಸಂಖ್ಯೆ ಹೆಚ್ಚಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...