alex Certify ಅಫ್ಘಾನಿಸ್ತಾನದಲ್ಲಿ ಟ್ಯಾಟೂ ಶಾಪ್​ ತೆರೆದ ಯುವತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಫ್ಘಾನಿಸ್ತಾನದಲ್ಲಿ ಟ್ಯಾಟೂ ಶಾಪ್​ ತೆರೆದ ಯುವತಿ…!

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​​ನಲ್ಲಿ ಟ್ಯಾಟೂ ಶಾಪ್​ ತೆರೆಯುವ ಮೂಲಕ ಸೊರಾಯಾ ಶಾಹಿದಿ ಎಂಬ ಯುವತಿ ಹೊಸ ಸಾಹಸಕ್ಕೆ ಅಣಿಯಾಗಿದ್ದಾರೆ.

ಇಸ್ಲಾಂ ಧರ್ಮದ ಅನುಸಾರ ಟ್ಯಾಟೂವನ್ನ ನಿಷೇಧಿಸಲಾಗಿದೆ, ಆದರೂ ಸಹ ಕಾಬೂಲ್​ನಲ್ಲೇ ಟ್ಯಾಟೂ ಅಂಗಡಿ ತೆರೆಯುವ ಮೂಲಕ ದೇಶದ ಮೊದಲ ಮಹಿಳಾ ಟ್ಯಾಟೂ ಕಲಾವಿದೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ನಾನು ಈ ವೃತ್ತಿಯನ್ನ ವಿದೇಶಗಳಲ್ಲಿ ಮಾಡಬಹುದಿತ್ತು. ಆದರೆ ನಾನು ಅಫ್ಘಾನಿಸ್ತಾನದಲ್ಲೇ ನನ್ನ ವೃತ್ತಿಯನ್ನ ಆರಂಭಿಸಿದೆ. ಏಕೆಂದರೆ ಈ ದೇಶದಲ್ಲಿ ಯಾವುದೇ ಮಹಿಳಾ ಟ್ಯಾಟೂ ಕಲಾವಿದರು ಇಲ್ಲ. ಹೀಗಾಗಿ ಈ ವೃತ್ತಿಯನ್ನ ಕೇವಲ ಪುರುಷರು ಮಾತ್ರವಲ್ಲದೇ ಮಹಿಳೆಯರೂ ಮಾಡಬಲ್ಲರು ಎಂಬುದನ್ನ ನಾನು ಅಫ್ಘಾನಿಸ್ತಾನದ ಜನತೆಗೆ ತೋರಿಸಿಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

ಟರ್ಕಿ ಹಾಗೂ ಇರಾನ್​ನಲ್ಲಿ ತರಬೇತಿ ಪಡೆದಿರುವ 27 ವರ್ಷದಿ ಶಾಹಿದಿ ನನ್ನ ಕೆಲಸ ಇಸ್ಲಾಂ ಧರ್ಮದಲ್ಲಿ ನ್ಯಾಯಸಮ್ಮತವಾಗಿದೆ ಎಂದು ನಂಬಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...