ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಟ್ಯಾಟೂ ಶಾಪ್ ತೆರೆಯುವ ಮೂಲಕ ಸೊರಾಯಾ ಶಾಹಿದಿ ಎಂಬ ಯುವತಿ ಹೊಸ ಸಾಹಸಕ್ಕೆ ಅಣಿಯಾಗಿದ್ದಾರೆ.
ಇಸ್ಲಾಂ ಧರ್ಮದ ಅನುಸಾರ ಟ್ಯಾಟೂವನ್ನ ನಿಷೇಧಿಸಲಾಗಿದೆ, ಆದರೂ ಸಹ ಕಾಬೂಲ್ನಲ್ಲೇ ಟ್ಯಾಟೂ ಅಂಗಡಿ ತೆರೆಯುವ ಮೂಲಕ ದೇಶದ ಮೊದಲ ಮಹಿಳಾ ಟ್ಯಾಟೂ ಕಲಾವಿದೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ನಾನು ಈ ವೃತ್ತಿಯನ್ನ ವಿದೇಶಗಳಲ್ಲಿ ಮಾಡಬಹುದಿತ್ತು. ಆದರೆ ನಾನು ಅಫ್ಘಾನಿಸ್ತಾನದಲ್ಲೇ ನನ್ನ ವೃತ್ತಿಯನ್ನ ಆರಂಭಿಸಿದೆ. ಏಕೆಂದರೆ ಈ ದೇಶದಲ್ಲಿ ಯಾವುದೇ ಮಹಿಳಾ ಟ್ಯಾಟೂ ಕಲಾವಿದರು ಇಲ್ಲ. ಹೀಗಾಗಿ ಈ ವೃತ್ತಿಯನ್ನ ಕೇವಲ ಪುರುಷರು ಮಾತ್ರವಲ್ಲದೇ ಮಹಿಳೆಯರೂ ಮಾಡಬಲ್ಲರು ಎಂಬುದನ್ನ ನಾನು ಅಫ್ಘಾನಿಸ್ತಾನದ ಜನತೆಗೆ ತೋರಿಸಿಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
ಟರ್ಕಿ ಹಾಗೂ ಇರಾನ್ನಲ್ಲಿ ತರಬೇತಿ ಪಡೆದಿರುವ 27 ವರ್ಷದಿ ಶಾಹಿದಿ ನನ್ನ ಕೆಲಸ ಇಸ್ಲಾಂ ಧರ್ಮದಲ್ಲಿ ನ್ಯಾಯಸಮ್ಮತವಾಗಿದೆ ಎಂದು ನಂಬಿದ್ದಾರೆ.