alex Certify ಕೆಲಸಕ್ಕೆ ಸೇರಿದ್ದಕ್ಕೆ ಇದೆಂಥಾ ಶಿಕ್ಷೆ…? ಮಹಿಳಾ ಅಧಿಕಾರಿ ಮೇಲೆ ನಡೆಯಿತು ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸಕ್ಕೆ ಸೇರಿದ್ದಕ್ಕೆ ಇದೆಂಥಾ ಶಿಕ್ಷೆ…? ಮಹಿಳಾ ಅಧಿಕಾರಿ ಮೇಲೆ ನಡೆಯಿತು ಘೋರ ಕೃತ್ಯ

ಕಾಬೂಲ್: ಪೊಲೀಸ್ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದ್ದ ಯುವತಿಯೊಬ್ಬರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಆಕೆಯ ಕಣ್ಣನ್ನೇ ಕಿತ್ತಿರುವ ಘೋರ ಘಟನೆ ಅಪ್ಘಾನಿಸ್ತಾನದ ಘಜನಿ ಪ್ರಾಂತ್ಯದಲ್ಲಿ ನಡೆದಿದೆ.

ಕೆಲಸ ಮುಗಿಸಿ ಕಚೇರಿಯಿಂದ ಹೊರ ಬರುತ್ತಿದ್ದ ವೇಳೆ ದ್ವಿಚಕ್ರವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು ದಾಳಿ ನಡೆಸಿ ಕಣ್ಣು ಕಿತ್ತಿದ್ದಾರೆ. ದಾಳಿಗೊಳಗಾದ ಮಹಿಳಾ ಪೊಲೀಸ್ ಅಧಿಕಾರಿಯನ್ನು ಖತೇರಾ ಎಂದು ಗುರುತಿಸಲಾಗಿದೆ. ಯುವತಿ ಮನೆ ಹೊಸ್ತಿಲು ದಾಟಿ ಕೆಲಸಕ್ಕೆ ಸೇರಿದ್ದಲ್ಲದೇ, ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವುದು ಕೆಂಗಣ್ಣಿಗೆ ಗುರಿಯಾಗಿತ್ತು.

ಖತೇರಾ ಕೆಲಸಕ್ಕೆ ಹೋಗಲು ಆಕೆಯ ತಂದೆ ಕೂಡ ನಿರಾಕರಿಸಿದ್ದರು. ಆದರೆ ಖತೇರಾ ತನ್ನ ಚಿಕ್ಕಂದಿನ ಕನಸಿನಂತೆ ಓದಿ ಇದೀಗ ಪೊಲೀಸ್ ಅಧಿಕಾರಿಯಾಗಿ ಸೇರಿದ್ದಳು ಎನ್ನಲಾಗಿದೆ. ದುಷ್ಕರ್ಮಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಖತೇರಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ತಾಲಿಬಾನಿಗಳ ಕೃತ್ಯವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...