alex Certify ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಯ್ತು ಹುಲಿರಾಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಯ್ತು ಹುಲಿರಾಯ..!

ಚಿಕಾಗೋದ ಮೃಗಾಲಯದಲ್ಲಿದ್ದ 10 ವರ್ಷದ ಹೆಣ್ಣು ಹುಲಿಗೆ ಧೈರ್ಯಶಾಲಿ ವೈದ್ಯರ ತಂಡ ಹಿಪ್​ ರಿಪ್ಲೇಸ್​ಮೆಂಟ್​ ಶಸ್ತ್ರಚಿಕಿತ್ಸೆಯನ್ನ ಮಾಡಿದೆ.

ಆದರೂ ಈ ಶಸ್ತ್ರಚಿಕಿತ್ಸೆ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಶಸ್ತ್ರ ಚಿಕಿತ್ಸೆ ನಡೆದ ಕೆಲವೇ ಸಮಯದಲ್ಲಿ ಹುಲಿಯ ಸೊಂಟದ ಭಾಗದಲ್ಲಿ ಅಳವಡಿಸಲಾಗಿದ್ದ ಕೃತಕ ವೈದ್ಯಕೀಯ ಸಾಧನ ಅದರ ಸ್ಥಳದಿಂದ ಜಾರಿದೆ ಎಂದು ವರದಿಯಾಗಿದೆ.

ಈ ಸೂಕ್ಷ್ಮವಾದ ಶಸ್ತ್ರಚಿಕಿತ್ಸೆಯನ್ನ ಪ್ರಾಣಿ ವೈದ್ಯರ ತಂಡ ಬಹಳ ನಾಜೂಕಾಗಿ ನಿರ್ವಹಿಸಿದೆ. ಮೆಲೆನಾ ಎಂಬ ಹುಲಿಗೆ ಕೈಗೊಳ್ಳಲಾದ ಶಸ್ತ್ರಚಿಕಿತ್ಸೆಯಲ್ಲಿ ಮೊದಲು ಆಕೆಯ ಮೂಳೆ ಜೋಡಣೆಯನ್ನ ಬೇರ್ಪಡಿಸಿ ಬಳಿಕ ವೈದ್ಯಕೀಯ ಸಾಧನವನ್ನ ಅಳವಡಿಸಲಾಗಿದೆ.

ಹುಲಿಯ ಕಾಲುಗಳ ಸಾಮರ್ಥ್ಯವನ್ನ ಸರಿಪಡಿಸೋಕೆ ಈ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿತ್ತು. ಇದೀಗ ಹುಲಿಯನ್ನ ನಿಗಾದಲ್ಲಿ ಇರಿಸಲಾಗಿದೆ. ಶಸ್ತ್ರಚಿಕಿತ್ಸೆ ಭಾಗಶಃ ಯಶಸ್ವಿಯಾಗಿದೆ. ಈ ಹುಲಿ ಮೊದಲಿಗಿಂತ ಚೆನ್ನಾಗಿ ನಡೆದಾಡಬಲ್ಲಳು ಎಂದು ಪ್ರಾಣಿ ಸಂಗ್ರಹಾಲಯ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...