alex Certify ‌ʼಮೇಯರ್ʼ ಆಗಲು ಭರ್ಜರಿ ಬಂಪರ್ ಆಫರ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಮೇಯರ್ʼ ಆಗಲು ಭರ್ಜರಿ ಬಂಪರ್ ಆಫರ್….!

ಮಿಚಿಗನ್: ಜೋನ್ ಕೊಲೊನೆ ಎಂಬುವವರು ಅಮೆರಿಕಾ ಜನ ತಿರಸ್ಕರಿಸಲಾಗದಂಥ ಆಫರ್ ಒಂದನ್ನು ನೀಡಿದ್ದಾರೆ. ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶ “ಯಾರಾದರೂ ಹೆಲ್ ನ (ನರಕದ) ಮೇಯರ್ ಆಗುತ್ತೀರಾ..?” ಎಂದು ಅವರು ಕೇಳಿದ್ದಾರೆ. ಆದರೆ, ಗಾಬರಿ ಬೇಡ. ಇಲ್ಲಿ ಹೆಲ್ ಎಂದರೆ ನರಕವಲ್ಲ. ಅಮೆರಿಕಾದ ಮಿಚಿಗನ್ ರಾಜ್ಯದ ಒಂದು ಟೌನ್‌ ಶಿಪ್ ನ ಹೆಸರು “ಹೆಲ್”.

ಹೆಲ್ ಟೌನ್ ಶಿಪ್ ಗೆ ಅಧಿಕೃತ ಮೇಯರ್ ಇಲ್ಲ. ಜೋನ್ ಕೊಲೆನೆ ಎಂಬುವವರು ಸ್ವಯಂಘೋಷಿತ ಮೇಯರ್ ಆಗಿದ್ದಾರೆ. ಹೆಲೋವಿನ್ ಹಬ್ಬಕ್ಕೆ ಅವರು ವಿಶೇಷ ಆಫರ್ ನೀಡಿದ್ದಾರೆ.

31 ಡಾಲರ್ ನೀಡಿ ತಮ್ಮ ಮನೆಯಲ್ಲಿ ಮೂರು ದಿನ ಬಂದು ಉಳಿಯಬಹುದು. ಇಲ್ಲಿ ಉಳಿದವರು ಮೂರು ದಿನಕ್ಕೆ ಹೆಲ್ ನ ತಾತ್ಕಾಲಿಕ ಮೇಯರ್ ಕೂಡ ಆಗಲಿದ್ದಾರೆ ಎಂದು ವಿವರಿಸಿದ್ದಾರೆ. ಗೋವೆ ಕಾಯಿಯಲ್ಲಿ ದೆವ್ವದ ಮುಖ ಕೊರೆದು ಭಯಾನಕ ದೆವ್ವದ ಮುಖವಾಡ ಸೃಷ್ಟಿಸಲಿದ್ದಾರೆ. ಅಲ್ಲದೆ, ಜನರೂ ದೆವ್ವದ ಮುಖವಾಡ ತೊಟ್ಟು ಓಡಾಡಲಿದ್ದಾರೆ. ಅ.24 ರಿಂದ ಬುಕ್ಕಿಂಗ್ ಪ್ರಾರಂಭವಾಗಲಿದೆ ಎಂದು ಅವರು ವಿವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...