alex Certify ಡಿನ್ನರ್ ಮಾಡುವವರಿಗೆ ಕಂಪನಿ ಕೊಡುತ್ತೆ ಪಾಂಡಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿನ್ನರ್ ಮಾಡುವವರಿಗೆ ಕಂಪನಿ ಕೊಡುತ್ತೆ ಪಾಂಡಾ

ಲಾಕ್ ಡೌನ್ ಬಳಿಕ ಈಗ ವಿಶ್ವದಾದ್ಯಂತ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ವಿವಿಧ ದೇಶಗಳಲ್ಲಿ ಆರಂಭವಾಗುತ್ತಿದೆ. ಸಾಮಾಜಿಕ ಅಂತರವನ್ನೇ ಮುಖ್ಯವಾಗಿಟ್ಟುಕೊಂಡು ವ್ಯಾಪಾರ-ವಹಿವಾಟು ಶುರುವಾಗಿದೆ.

ಥೈಲ್ಯಾಂಡ್ ನ ರೆಸ್ಟೋರೆಂಟ್ ನ ರೆಸ್ಟೋರೆಂಟ್ ನಲ್ಲಿ ಒಂದು ಟೇಬಲ್ಲಿಗೆ ಒಬ್ಬ ಗ್ರಾಹಕರು ಮಾತ್ರ ಕೂರುವ ನಿಯಮ ಜಾರಿಗೆ ತರಲಾಗಿದೆ. ಕೊರೋನಾ ಅಪಾಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿಯಮ ಜಾರಿಗೆ ತರಲಾಗಿದೆ.

ಈ ರೆಸ್ಟೋರೆಂಟ್ ಗೆ ಬರುವ ಗ್ರಾಹಕರು ಒಬ್ಬಂಟಿಯಾಗಿ ಕುಳಿತು ಆಹಾರ ಸೇವಿಸಬೇಕು ಎಂಬ ಬೇಸರ ಮಾಡಿಕೊಳ್ಳುವ ಸಮಯ ಬರುವುದಿಲ್ಲ, ಏಕೆಂದರೆ ಎದುರಿಗೆ ಪಾಂಡ ರೂಪದ ಗೊಂಬೆ ಕುಳಿತಿರುತ್ತದೆ.

ಗ್ರಾಹಕರಿಗೆ ಒಂಟಿತನ ಕಾಡಬಾರದು ಹಾಗೂ ಸಾಮಾಜಿಕ ಅಂತರವು ಪಾಲನೆಯಾಗಬೇಕು ಎಂಬ ನಿಟ್ಟಿನಲ್ಲಿ ಪ್ರತಿ ಟೇಬಲ್ ನಲ್ಲಿ ಪಾಂಡಾಗಳನ್ನು ಇಡಲಾಗಿದೆ.

ರೆಸ್ಟೋರೆಂಟ್ ನ ಈ ಕ್ರಮಕ್ಕೆ ಜಾಲತಾಣದಲ್ಲಿ ಚಿತ್ರ-ವಿಚಿತ್ರ ಪ್ರತಿಕ್ರಿಯೆಗಳು ಬಂದಿವೆ. ಗ್ರಾಹಕರೊಬ್ಬರು ರೆಸ್ಟೋರೆಂಟ್ ವಿಚಾರವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...