
ಯಾವಾಗಲೂ ಅಷ್ಟೇ, ಈ ಪುಟ್ಟ ಮರಿಗಳು ಬಹಳ ಕುತೂಹಲ ಇರುವ ಕಾರಣ ಕಂಡಕಂಡದ್ದನ್ನೆಲ್ಲಾ ಕೆಣಕುತ್ತಾ ಚೇಷ್ಟೆ ಮಾಡುವುದನ್ನು ನೋಡುವುದೇ ಒಂದು ಚಂದ.
ಇಂಥದ್ದೇ ಒಂದು ನಿದರ್ಶನದಲ್ಲಿ, ಸಿಂಹದ ಮರಿಗಳು ಕಾಡಿನಲ್ಲಿರುವ ತಮ್ಮ ಪ್ರದೇಶದಲ್ಲಿ ಮರದ ಮೇಲೆ ಸೀ-ಸಾ ಆಟ ಆಡುತ್ತಾ ಚಿನ್ನಾಟವಾಡುತ್ತಿರುವ ವಿಡಿಯೋವೊಂದು ನೆಟ್ಟಿಗರಿಗೆ ಬಲೇ ಇಷ್ಟವಾಗಿದೆ. ಮುದ್ದಾಗಿರುವ ಸಿಂಹದ ಮರಿಗಳು ತಮ್ಮ ತುಂಟಾಟದಿಂದ ಇನ್ನಷ್ಟು ಮುದ್ದಾಗಿ ಕಾಣುತ್ತಿವೆ.
ದಕ್ಷಿಣ ಆಫ್ರಿಕಾದ ಮಲಾ ಮಲಾ ಸಂರಕ್ಷಿತ ಅರಣ್ಯದಲ್ಲಿ ಈ ವಿಡಿಯೋವನ್ನು ಸೇರೆ ಹಿಡಿಯಲಾಗಿದೆ.