alex Certify ಪುಸ್ತಕದ ಫೋಟೋ ನೋಡಿ ಯುವತಿಯಿಂದ ಟ್ವಿಟರ್ ನಲ್ಲೇ ಮದುವೆ ಪ್ರಪೋಸಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಸ್ತಕದ ಫೋಟೋ ನೋಡಿ ಯುವತಿಯಿಂದ ಟ್ವಿಟರ್ ನಲ್ಲೇ ಮದುವೆ ಪ್ರಪೋಸಲ್

ಶೌಮಿಕ್ ಎಂಬ ಯುವಕ ತನ್ನ ಕೋಣೆಯ ತುಂಬ ಪುಸ್ತಕಗಳಿರುವ ಫೋಟೋವನ್ನು ಪೋಸ್ಟ್ ಮಾಡಿ ಪ್ರಸಿದ್ಧನಾಗಿಬಿಟ್ಟಿದ್ದಾನೆ.‌ ಎಷ್ಟು ಎಂದರೆ ಆತನಿಗೆ ಟ್ವಿಟರ್ ನಲ್ಲೇ ಮದುವೆ ಪ್ರಪೋಸಲ್ ಕೂಡ ಬಂದುಬಿಟ್ಟಿದೆ…!
ರಾವೆನ್ ಎಂಬಾಕೆ “ನಾವಿಬ್ಬರೂ ಮದುವೆಯಾಗಿಬಿಡೋಣ. ನನಗೆ ಕಾಲ್ಪನಿಕ ಕಾದಂಬರಿಗಳೆಂದರೆ ಇಷ್ಟ, ಓದುತ್ತ ಇರೋಣ” ಎಂದಿದ್ದಾಳೆ.

ಶೌಮಿಕ್ “ನಾನು ಲೈಬ್ರರಿಯಲ್ಲೇ ವಾಸಿಸುತ್ತಿದ್ದೇನೆ” ಎಂದು ಕ್ಯಾಪ್ಶನ್ ಬರೆದಿದ್ದಾನೆ. ಕೋಣೆಯ ಒಟ್ಟು ಮೂರು ಫೋಟೋಗಳನ್ನು ಆತ ಹಂಚಿಕೊಂಡಿದ್ದು, ಸುಮಾರು 1000 ಪುಸ್ತಕಗಳು ರೂಂನಲ್ಲಿ ಇರಬಹುದು ಎಂದು ಮೇಲ್ನೋಟಕ್ಕೇ ಕಾಣುತ್ತದೆ.

ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆ ಪುಸ್ತಕ ಪ್ರೇಮಿಗಳಿಂದ ಸಾಕಷ್ಟು ಕಮೆಂಟ್ ಬಂದಿದೆ. ಬಹುತೇಕರು ಕಮೆಂಟ್ ಮಾಡಿ, ನಾವು ನಿಮ್ಮ ಮನೆಗೆ ಬರುತ್ತಿದ್ದೇವೆ ಎಂದು ಹೇಳಿದ್ದಾರೆ. ಒಂದು ಮೂಲೆ ನನಗಿರಲಿ ಎಂದು ಕೂಡ ಕಮೆಂಟ್ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...