alex Certify ಲಸಿಕೆಗಾಗಿ ಹಿಮದ ನಡುವೆ ಆರು ಮೈಲಿ ನಡೆದುಹೋದ 90 ರ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆಗಾಗಿ ಹಿಮದ ನಡುವೆ ಆರು ಮೈಲಿ ನಡೆದುಹೋದ 90 ರ ಮಹಿಳೆ

Image result for 90-Year-Old US Woman Walks Through Six Miles of Snow to Get Covid-19 Vaccine

ನೆಲದ ಮೇಲೆ ಒಂದಡಿಯಷ್ಟು ಹಿಮ ಕಟ್ಟಿದ್ದರೂ ಸಹ ಸಿಯಾಟಲ್‌ನ ಈ 90ರ ಹರೆಯದ ಹಿರಿಯ ಜೀವಕ್ಕೆ ತನ್ನ ಮೊದಲ ಕೊರೋನಾ ವೈರಸ್‌ ಲಸಿಕೆ ಪಡೆಯುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ.

ಫ್ರಾನ್‌ ಗೋಲ್ಡ್‌ಮನ್ ಹೆಸರಿನ ಈ ಮಹಿಳೆ ಆರು ಮೈಲಿಯಷ್ಟು ದೂರ ನಡೆದು ಲಸಿಕೆ ಹಾಕಿಸಿಕೊಂಡಿದ್ದಾರೆ. ಶುಕ್ರವಾರ ಹಾಗೂ ಶನಿವಾರ ಭಾರೀ ಶೀತಗಾಳಿಯ ಪರಿಣಾಮ ನಗರದ ಬೀದಿಗಳೆಲ್ಲಾ ಹಿಮಾವೃತಗೊಂಡಿದ್ದವು. ಇವೆಲ್ಲದರ ನಡುವೆಯೇ ಲಸಿಕೆ ಹಾಕಿಸಿಕೊಳ್ಳಲು ಭಾನುವಾರ ಅಪಾಯಿಂಟ್‌ಮೆಂಟ್ ಪಡೆದಿದ್ದ ಗೋಲ್ಡ್‌ಮನ್, ಕೊನೆಗೂ ಇಂಜೆಕ್ಷನ್ ಪಡೆದುಕೊಂಡಿದ್ದಾರೆ.

ಪ್ರಾಣ ಪಣಕ್ಕಿಟ್ಟು ಕಾಲುವೆಗೆ ಬಿದ್ದ ಬಸ್‌ನಿಂದ ಇಬ್ಬರನ್ನು ರಕ್ಷಿಸಿದ ಶಿವರಾಣಿ ಈಗ ಎಲ್ಲರ ಕಣ್ಮಣಿ

ಬೆಚ್ಚನೆಯ ಉಡುಪುಗಳನ್ನು ಧರಿಸಿದ ಗೋಲ್ಡ್‌ಮನ್, ಹಿಮಾವೃತ ಬೀದಿಗಳ ನಡುವೆಯೇ ಆರು ಮೈಲು ದೂರ ನಡೆದುಕೊಂಡು ಹೋಗಿ, ಅಪಾಯಿಂಟ್‌ಮೆಂಟ್ ಸಮಯಕ್ಕಿಂತ ಕೇವಲ 5 ನಿಮಿಷ ತಡವಾಗಿ ಜಾಗ ತಲುಪಿ ಲಸಿಕೆ ಹಾಕಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...