alex Certify ಹೀಗೊಂದು ಗೌರವಾನ್ವಿತ ಹುದ್ದೆಗೆ ಲಭ್ಯವಾಗುತ್ತಿದೆ ಭಾರೀ ಸಂಬಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೊಂದು ಗೌರವಾನ್ವಿತ ಹುದ್ದೆಗೆ ಲಭ್ಯವಾಗುತ್ತಿದೆ ಭಾರೀ ಸಂಬಳ

ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್ ನಗರದ ಈ 87 ವರ್ಷದ ವ್ಯಕ್ತಿಯನ್ನು ಆ ಊರಿನ ಅಧಿಕೃತ ವಿಝಾರ್ಡ್ (ಜಾದೂಗಾರ) ಎಂದು ಘೋಷಿಸಲಾಗಿದ್ದು, ಇವರಿಗೆ ವರ್ಷಕ್ಕೆ $10,000 ವೇತನವನ್ನೂ ನಿಗದಿ ಮಾಡಲಾಗಿದೆ.

ಬ್ರಿಟನ್‌ನಲ್ಲಿ ಜನಿಸಿದ ಇಯಾನ್‌ ಬ್ರಾಕೆನ್‌ಬರಿ ಚಾನ್ನೆಲ್ 1970ರ ದಶಕದಲ್ಲಿ ನ್ಯೂಜಿಲೆಂಡ್‌ಗೆ ಆಗಮಿಸಿದ್ದು, ‘The Wizard of Christchurch’ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಸದಾ ಚೂಪಾದ ಹ್ಯಾಟ್‌ ಧರಿಸಿಕೊಂಡು, ಕೈಯಲ್ಲಿ ಜಾದೂಗಾರ ಕೋಲುಗಳನ್ನು ಇಟ್ಟುಕೊಂಡು ತಿರುಗಾಡುವ ಇಯಾನ್‌, ಕ್ರೈಸ್ಟ್ ‌ಚರ್ಚ್‌ನಲ್ಲಿ ಬಹಳ ಖ್ಯಾತಿ ಪಡೆದಿರುವ ವ್ಯಕ್ತಿಯಾಗಿದ್ದಾರೆ. ತಮ್ಮ ಈ ಹೊಸ ಕೆಲಸಕ್ಕೂ ಮುನ್ನ ಇಯಾನ್‌ ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ ವಿವಿಯಲ್ಲಿ ಸಮಾಜಶಾಸ್ತ್ರ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.

1990ರಲ್ಲಿ ನ್ಯೂಜಿಲೆಂಡ್ ಪ್ರಧಾನಿ ಖುದ್ದು ಇಯಾನ್‌ಗೆ ಪತ್ರ ಬರೆದು ಈ ವಿಝಾರ್ಡ್‌ ಪಾತ್ರಧಾರಿಯಾಗಲು ವಿನಂತಿಸಿದ ದಿನದಿಂದ ಅವರೂ ಈ ಹೊಸ ಪಾತ್ರಕ್ಕೆ ಬಂದಿದ್ದಾರೆ. ತಮ್ಮ ಈ ಪಾತ್ರಕ್ಕಾಗಿ ಇಯಾನ್‌ ಕ್ರೈಸ್ಟ್‌ಚರ್ಚ್ ನಗರ ಪಾಲಿಕೆಯಿಂದ, 1998ರಿಂದಲೂ ಪ್ರತಿವರ್ಷವೂ ಸಹ $10,000ಗಳನ್ನು ಪಡೆಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...