alex Certify ನಕಲಿ ನೋಟು ತಯಾರಿಸಿದ 8 ವರ್ಷದ ಬಾಲಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕಲಿ ನೋಟು ತಯಾರಿಸಿದ 8 ವರ್ಷದ ಬಾಲಕ…!

ಎಂಟು ವರ್ಷದ ಬಾಲಕನೊಬ್ಬ ನೋಟನ್ನು ಮುದ್ರಿಸಿ ಉಚಿತವಾಗಿ ಹಣ ಗಳಿಸುವ ಮಾರ್ಗ ಕಂಡುಕೊಂಡೆನೆಂದು ತನ್ನ ಪೋಷಕರನ್ನೇ ಬೇಸ್ತು ಬೀಳುವಂತೆ ಮಾಡಿದ್ದಾನೆ.

ಇಂಗ್ಲೆಂಡ್ ಯಾರ್ಕ್ಷೈರ್ ಪ್ರದೇಶದ ಜೇಕ್ ಎಂಬ ಬಾಲಕ‌ ಅಂತರ್ಜಾಲದಲ್ಲಿ ನೋಟಿನ ಮಾಹಿತಿಯನ್ನು ಹುಡುಕಿ ಐದು ಪೌಂಡ್ ನ ನೋಟನ್ನು ಮುದ್ರಿಸಿದ್ದಾನೆ.

ಬಳಿಕ ತನ್ನ ತಾಯಿಗೆ ನೀಡಿ ನಾನು ಇದನ್ನು ಕಂಡುಕೊಂಡೆ ಎಂದಿದ್ದಾನೆ. ತಾಯಿ ಲೂಯಿಸ್ ಗೆ ಅನುಮಾನ ಬಂದು, ಎಲ್ಲಿ ಸಿಕ್ಕಿತೆಂದು ಒತ್ತಡ ಹೇರಿದ್ದಾರೆ. ಬಳಿಕ ಆತ ಸಾಮಾಜಿಕ ಜಾಲತಾಣದಲ್ಲಿ ಹುಡುಕಿ, ಅದನ್ನು ಸಿದ್ಧಪಡಿಸಿದ್ದ ಎಂಬುದು ಗೊತ್ತಾಯಿತು.

5 ಪೌಂಡ್ ನ ನೈಜ ನೋಟಿಗೆ ಸರಿಹೊಂದುವ ಗಾತ್ರವನ್ನು ಸಿದ್ಧಪಡಿಸಲು ಆ ಬಾಲಕ ಹತ್ತು ನಿಮಿಷ ತೆಗೆದುಕೊಂಡಿದ್ದನಂತೆ. ತನ್ನ ಮಗನ ಕೌಶಲ್ಯತೆಯನ್ನು ಕಂಡ ತಾಯಿ‌ ನಗೆಗಡಲಲ್ಲಿ ತೇಲಿದ್ದಾರೆ.

ಜೆಕ್ ಇದನ್ನು ಹೇಗೆ ಕಂಡುಕೊಂಡ ಎಂದು‌ ಮೊದಲು ನನಗೆ ಅರ್ಥವಾಗಲಿಲ್ಲ, ನನ್ನ ಮೊಬೈಲ್ ಫೋನ್ ಪರಿಶೀಲಿಸಿದಾಗ ಅವನು £5 ನೋಟಿಗಾಗಿ ಹುಡುಕಿದ್ದನ್ನು ಗಮನಿಸಿದೆ. ಬಳಿಕ ಈ ರೀತಿ ಮಾಡುವುದು ಕಾನೂನು ಬಾಹಿರ ಎಂದು ತಿಳಿಸಲಾಯಿತು, ಎಂಟು ವರ್ಷದ ಮಗುವಿಗೆ ತಾನು ಕಾನೂನು ಉಲ್ಲಂಘಿಸಿದೆ ಎಂದು ಅರಿವಾದಾಗ ಗಾಬರಿಗೊಂಡು ನೋಟನ್ನು ಹರಿದುಹಾಕಿದನು ಎಂದು ತಾಯಿ ವಿವರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...