alex Certify ಪ್ರಕೃತಿಯ ಮುನಿಸಿಗೂ ಜಗ್ಗದೆ ನಿಂತ ವುಹಾನ್‌ ನ 700 ವರ್ಷ ಹಳೆಯ ದೇಗುಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಕೃತಿಯ ಮುನಿಸಿಗೂ ಜಗ್ಗದೆ ನಿಂತ ವುಹಾನ್‌ ನ 700 ವರ್ಷ ಹಳೆಯ ದೇಗುಲ

700-year-old Temple in China Stands Defiant amid Gushing Flood Water

ಪ್ರವಾಹದಿಂದ ಮೇಲ್ಛಾವಣಿಯವರೆಗೂ ನೀರು ತುಂಬಿದ್ದರೂ 700 ವರ್ಷಗಳ ಹಳೆಯ ದೇಗುಲ ಮಾತ್ರ ಅಲುಗಾಡದೇ ನಿಂತಿದೆ. ಚೀನಾದ ವುಹಾನ್ ನ ಯಾಂಗ್ಟಜ್ ನದಿಯ ನಡುವೆ ಇರುವ ಕಲ್ಲಿನ ಗುಡ್ಡದ ಮೇಲೆ ಗುನ್ಯಾಂಗ್ ದೇಗುಲವನ್ನು ನಿರ್ಮಿಸಲಾಗಿದೆ.

ಜೂನ್ ನಿಂದ ಸುರಿಯುತ್ತಿರುವ ಭಾರಿ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 140 ಜನರು ನಾಪತ್ತೆಯಾಗಿದ್ದಾರೆ. 15 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.‌ ಪ್ರವಾಹದಲ್ಲಿ ದೇಗುಲದ ಸುತ್ತ ಹಾಗೂ ಮೆಲ್ಛಾವಣಿ ಸಮೀಪದವರೆಗೂ ನೀರು ತುಂಬಿದೆ. ಆದರೆ, ದೇವಸ್ಥಾನ ಅಲುಗದೇ ನಿಂತ‌ ವಿಡಿಯೋ ಫೇಸ್ ಬುಕ್ ಸೇರಿ ವಿವಿಧ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟ್ವಿಟರ್ ನಲ್ಲಿ ವಿಡಿಯೋ ಶೇರ್ ಮಾಡಿದ ಜೆನ್ನಿಫರ್‌ ಝೆಂಗ್ ಎಂಬುವವರು, “ಇದನ್ನು ನೀವು ಕಬ್ಬಿಣದಷ್ಟೇ ಗಟ್ಟಿ ಎಂದು ಹೇಳಬಹುದು” ಎಂದು ಕ್ಯಾಪ್ಶನ್ ನೀಡಿದ್ದಾರೆ. ಬೌದ್ಧ ದೇಗುಲವನ್ನು ಸಾಂಗ್ ರಾಜಕುಲದ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಯಿತು. ವುಹಾನ್ ರಾಜಕುಲದ ಆಳ್ವಿಕೆ ಸಮಯದಲ್ಲಿ ಮರು ನಿರ್ಮಾಣ ಮಾಡಲಾಗಿತ್ತು. ಹಲವು ವರ್ಷಗಳಿಂದ ದೇಗುಲ ಪ್ರವಾಹ ಎದುರಿಸಿಕೊಂಡು ಬಂದಿದೆ. ತೀರ ಇತ್ತೀಚೆಗೆ ಅಂದರೆ‌ 1998 ಹಾಗೂ 2007 ರಲ್ಲೂ ಮುಳುಗಡೆಯಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...