alex Certify ಬ್ರಿಟನ್ ರಾಣಿಗೆ ಪಝಲ್ ಕಳುಹಿಸಿದ 7ರ ಪೋರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಿಟನ್ ರಾಣಿಗೆ ಪಝಲ್ ಕಳುಹಿಸಿದ 7ರ ಪೋರ…!

ಎಲ್ಲರೊಂದಿಗೂ ಸಂತಸ ಹಂಚಿಕೊಳ್ಳುವುದು ಜೀವಮಾನದಲ್ಲಿ ನಾವು ಮಾಡುವ ಅತ್ಯಂತ ಶ್ರೇಷ್ಠ ಕೆಲಸಗಳಲ್ಲಿ ಒಂದು ಎಂದು ಆಗಾಗ ಕೇಳುತ್ತಲೇ ಬಂದಿದ್ದೇವೆ. ಇಂಟರ್ನೆಟ್ ಇರುವ ಕಾರಣದಿಂದ ನಾವು ದಿನನಿತ್ಯದ ಜೀವನದಲ್ಲಿ ಇಂಥ ಸಾಕಷ್ಟು ನಿದರ್ಶನಗಳನ್ನು ನೋಡುತ್ತಲಿದ್ದೇವೆ.

ಬ್ರಿಟನ್‌ನ ಎಸ್ಸೆಕ್ಸ್‌ನ 7 ವರ್ಷದ ತಿಮೋತಿ ಮ್ಯಾಡರ್ಸ್ ಹೆಸರಿನ ಹುಡುಗನೊಬ್ಬ, ಬ್ರಿಟನ್‌ ರಾಣಿ ಕ್ವೀನ್ ಎಲಿಝಬೆತ್‌ಗೆ ಪತ್ರ ಮುಖೇನ ಪುಟ್ಟದೊಂದು ಪಝಲ್ ‌ಅನ್ನು ‘Happiness Word Search’ ಹೆಸರಿನಲ್ಲಿ ಕಳುಹಿಸಿದ್ದಾನೆ. ಸಂತಸಕ್ಕೆ ಅನ್ವರ್ಥವಾದ ಪದಗಳನ್ನು ಈ ಪಝಲ್‌ನಲ್ಲಿ ರಾಣಿಗೆ ಕೋರಲಾಗಿತ್ತು.

ಈ ಪತ್ರಕ್ಕೆ ಪ್ರತಿಕ್ರಿಯಿಸಿದ ಎಲಿಝಬೆತ್‌, ಬಾಲಕನ ಈ ನಡೆಯನ್ನು ಮೆಚ್ಚಿಕೊಂಡಿದ್ದು, ಪ್ರಸಕ್ತ ಪರಿಸ್ಥಿತಿಯ ನಡುವೆ ಬಾಲಕನ ಆರೋಗ್ಯ ಚೆನ್ನಾಗಿದೆ ಎಂದು ಆಶಿಸುತ್ತಿರುವುದಾಗಿ ಹೇಳಿದ್ದಾರೆ.

The COVID-19 lockdown has hit many individuals across the nation of Britain, and indeed further afield across the…

Posted by The Royalists on Friday, July 10, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...