alex Certify ನೀರಿನಾಳದಲ್ಲಿ ಸ್ಪೋಟಗೊಂಡ 75 ವರ್ಷದ ಹಳೆ ಬಾಂಬ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಿನಾಳದಲ್ಲಿ ಸ್ಪೋಟಗೊಂಡ 75 ವರ್ಷದ ಹಳೆ ಬಾಂಬ್

ದ್ವಿತೀಯ ವಿಶ್ವ ಮಹಾಯುದ್ಧದ ಕಾಲಕ್ಕೆ ಸೇರಿದ ಐದು ಟನ್‌ ಸಾಮರ್ಥ್ಯದ ಬಾಂಬೊಂದು ಬಾಲ್ಟಿಕ್‌ ಸಮುದ್ರದಲ್ಲಿ ಸ್ಪೋಟಗೊಂಡಿದ್ದು ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ ಎಂದು ಪೋಲಿಶ್‌ ಅಧಿಕಾರಿಗಳು ತಿಳಿಸಿದ್ದಾರೆ.

’ಟಾಲ್‌ಬಾಯ್‌’ ಅಡ್ಡನಾಮದ ಈ ಬಾಂಬಿಗೆ ’ಭೂಕಂಪನದ ಬಾಂಬ್‌’ ಎಂದು ಕರೆಯಲಾಗುತ್ತಿದ್ದು, 1945ರಲ್ಲಿ ನಾಝಿ ಸಮರನೌಕೆಯ ಮೇಲೆ ರಾಯಲ್ ವಾಯುಪಡೆ ಈ ಬಾಂಬನ್ನು ಹಾಕಿತ್ತು. ವಾಯುವ್ಯ ಪೋಲೆಂಡ್‌ನ ಬಂದರು ನಗರಿ ಸ್ವಿನೋಸೆಯಲ್ಲಿ ಡ್ರೆಡ್ಜಿಂಗ್‌ ಮಾಡುತ್ತಿದ್ದ ಸಂದರ್ಭದಲ್ಲಿ ಈ ಬಾಂಬಿನ ಮೂತಿ ಕಂಡಿದೆ.

ಆರು ಮಿಟರ್‌ಗಿಂತ ಉದ್ದವಿರುವ ಈ ಬಾಂಬ್‌ನಲ್ಲಿ 2.4 ಟನ್‌ ಸ್ಪೋಟಕಗಳಿದ್ದು, ಇದು 3.6 ಟನ್‌ TNTಗೆ ಸಮನಾಗಿದೆ. ಪಕ್ಕದಲ್ಲೇ ಸೇತುವೆಯೊಂದು ಇರುವ ಕಾರಣ ಈ ಬಾಂಬ್‌ ಅನ್ನು ಸಾಂಪ್ರದಾಯಿಕ ರೀತಿಯಲ್ಲಿ ನಿಯಂತ್ರಿತ ಸ್ಪೋಟ ಮಾಡುವ ಆಯ್ಕೆ ಇರಲಿಲ್ಲ.

ಹೀಗಾಗಿ ಸ್ಪೋಟಕವನ್ನೆಲ್ಲಾ ಯಾವುದೇ ಸ್ಫೋಟವಿಲ್ಲದೇ ಹಾಗೇ ಸುಟ್ಟುಬಿಡುವ ತಂತ್ರವೊಂದನ್ನು ನೌಕಾಪಡೆ ಅನುಸರಿಸಿದೆ. ರಿಮೋಟ್‌ ನಿಯಂತ್ರಕದಿಂದ ಶೆಲ್‌ ಒಳಗೆ ಉರಿಯುವ ಪ್ರಕ್ರಿಯೆಯನ್ನು ನಿಯಂತ್ರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...