alex Certify ಕೋವಿಡ್‌ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಲು ಸೈಕಲ್‌ ನಲ್ಲಿ 3200 ಕಿ.ಮೀ. ಕ್ರಮಿಸಿದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್‌ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಲು ಸೈಕಲ್‌ ನಲ್ಲಿ 3200 ಕಿ.ಮೀ. ಕ್ರಮಿಸಿದ ಬಾಲಕ

5-Year-Old Telugu Boy from UK Raises Rs 3.7 Lakh for Covid-19 ...

ಮ್ಯಾಂಚೆಸ್ಟರ್‌: ಭಾರತದ ಕೋವಿಡ್ 19 ಪರಿಹಾರ ನಿಧಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ 3.7 ಲಕ್ಷ ರೂ. ಸಂಗ್ರಹಿಸುವ ಮೂಲಕ 5 ವರ್ಷದ ಭಾರತೀಯ ಮೂಲದ ಬಾಲಕ ಮಿಂಚಿದ್ದಾನೆ.

ಮ್ಯಾಂಚೆಸ್ಟರ್‌ ನಿವಾಸಿ ಅನೀಶ್ವರ ಕುಂಚಲಾ ‘ಲಿಟ್ಲ್‌ ಪ್ಯಾಡಲರ್ಸ್ ಅನೀಶ್ ಆ್ಯಂಡ್ ಫ್ರೆಂಡ್ಸ್’ ‌ಹೆಸರಿನಲ್ಲಿ ಮೇ ನಲ್ಲಿ ಸೈಕ್ಲಿಂಗ್ ಪ್ರಾರಂಭಿಸಿದ್ದಾನೆ.

ಬಾಲಕ ಇತರ 60 ಬಾಲಕರೊಡಗೂಡಿ ಸೈಕಲ್ ನಲ್ಲಿ 3,200 ಕಿಮೀ ಸಂಚರಿಸಿದ್ದಾನೆ.‌ ಕೇವಲ ಭಾರತೀಯ ಪರಿಹಾರ ನಿಧಿಗೆ ಮಾತ್ರವಲ್ಲ. ಯುಕೆ ನ್ಯಾಷನಲ್ ಹೆಲ್ತ್ ಸರ್ವೆ ಸಹಾಯದೊಂದಿಗೆ ಒಂದು ಕ್ರಿಕೆಟ್ ಟೂರ್ನಿಯನ್ನೂ ಬಾಲಕ ಆಯೋಜಿಸಿದ್ದ.‌

ನಡೆಯಲು ಕಷ್ಟಪಡುವ ಯುಕೆಯ ಥಾಮಸ್ ಮೂರ್ ಎಂಬ 100 ವರ್ಷದ ವೃದ್ಧ, ವಾಕಿಂಗ್ ಸ್ಟಿಕ್ ಹಿಡಿದು ಗಾರ್ಡನ್ ನಲ್ಲಿ 100 ಸುತ್ತು ನಡೆಯುವ ಮೂಲಕ 317 ಕೋಟಿ ರೂ. ನಿಧಿಯನ್ನು ಸಂಗ್ರಹಿಸಿ ಯುಕೆ ಭ್ರಾತೃತ್ವ ನಿಧಿಗೆ ಸಂಗ್ರಹಿಸಿ ಕೊಟ್ಟಿದ್ದರು. ಇದರಿಂದ ಪ್ರೇರಿತನಾದ ಬಾಲಕ ತಾನೂ ಹಣ ಸಂಗ್ರಹಿಸಿದ್ದಾನೆ.‌

ಆಂಧ್ರ, ತೆಲಂಗಾಣದ ಬ್ರಿಟಿಷ್‌ ಹೈ ಕಮಿಷನರ್, ಆ್ಯಂಡ್ರೂ ಫ್ಲೇಮಿಂಗ್ ಟ್ವಿಟರ್ ನಲ್ಲಿ ಈ ವಿಷಯ ಹಂಚಿಕೊಂಡಿದ್ದು, ಬಾಲಕನ‌ ಸಾಹಸಗಾಥೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.‌

ಬಾಲಕನ ತಂದೆ – ತಾಯಿ‌ ಆಂಧ್ರ ಪ್ರದೇಶದ ಚಿತ್ತೂರು ಮೂಲದವರಾಗಿದ್ದು, ವಾಷಿಂಗ್ಟನ್‌ ಸೌತ್ ಎಂಪಿ ಆ್ಯಂಡಿ ಕಾರ್ಟರ್ ಅನೀಶ್ವರ್ ನಿಧಿಗೆ ದೇಣಿಗೆ ನೀಡಿದ್ದಾರೆ. ಎಂಪಿ ಚಾರ್ಲೊಟ್ಟ್ ಅವರು ಬಾಲಕನನ್ನು ಆ.6 ರಂದು ಭೇಟಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...