alex Certify ಅಬ್ಬಾ…! ಬ್ರೂಸ್ಲಿ ಸಾಹಸವನ್ನು ಯಥಾವತ್ತಾಗಿ ಮಾಡಿದ ಪುಟ್ಟ ಪೋರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ…! ಬ್ರೂಸ್ಲಿ ಸಾಹಸವನ್ನು ಯಥಾವತ್ತಾಗಿ ಮಾಡಿದ ಪುಟ್ಟ ಪೋರ

ಹಾಲಿವುಡ್‌ನಲ್ಲಿ ತಮ್ಮದೇಯಾದ‌ ಛಾಪು ಮೂಡಿಸಿದ್ದ, ಮಾರ್ಷಿಯಲ್ ಆರ್ಟ್‌ನಲ್ಲಿ ಕಿಂಗ್ ಆಗಿದ್ದ ಬ್ರೂಸ್ಲಿ ನಿಧನರಾಗಿ ನಾಲ್ಕೂವರೆ ದಶಕಗಳೇ ಕಳೆದಿವೆ. ಆದರೂ ಅವರ ಸಿನಿಮಾಗಳು ಮಾತ್ರ ಇಂದಿಗೂ ಮೈಲುಗಲ್ಲಾಗಿದೆ.

ಎಂಟರ್ ದಿ ಡ್ರಾಗನ್, ಗೇಮ್ ಆಫ್ ಡೆತ್, ಫಿಸ್ಟ್ ಆಫ್ ಪ್ಯೂರಿ, ರಿಟರ್ನ್‌ ಆಫ್‌ ದಿ ಡ್ರಾಗನ್ ಸಿನಿಮಾಗಳಲ್ಲಿ ಅವರು ಮಾಡಿರುವ ಮಾರ್ಷಿಯಲ್ ಆರ್ಟ್ಸ್‌ನ ಕಸರತ್ತು ಇಂದಿನ ಅನೇಕ ಯುವಕರು ಕಾಪಿ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಇದೀಗ ಐದು ವರ್ಷದ ಬಾಲಕನೊಬ್ಬ ಬ್ರೂಸ್ಲಿ ಸ್ಟೈಲ್‌ನ್ನು ಯಥಾವತ್ತಾಗಿ ಕಾಪಿ ಮಾಡಿರುವುದು ಇದೀಗ ಭಾರಿ ಚರ್ಚಗೆ ಗ್ರಾಸವಾಗಿದೆ.

ಯ್ರಾಂಸೇ ಇಮಾಯಿ ಎನ್ನುವ ಐದು ವರ್ಷದ ಬಾಲಕ ಈ‌ ಕಸರತ್ತು ಮಾಡಿದ್ದಾನೆ. ಈಗ ಇಮಾಯಿಗೆ 10 ವರ್ಷ. ಆದರೆ ಬಾಲಕ ಐದು ವರ್ಷದವನಿದ್ದಾಗ, ಮಾಡಿರುವ ವಿಡಿಯೊವನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ. ಎಂಟರ್ ದಿ ಡ್ರ್ಯಾಗನ್ ಚಿತ್ರ ಮಾರ್ಷಲ್ ಆರ್ಟ್‌ನ ಕಸರತ್ತು ಯಥಾವತ್ತಾಗಿ ಇಮಾಯಿ ಮಾಡಿದ್ದಾನೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಕೇವಲ ಇದೊಂದೆ ಮಾತ್ರವಲ್ಲದೇ, ಇದೇ ರೀತಿಯ ಹಲವು ವಿಡಿಯೊಗಳನ್ನು ಶೇರ್ ಮಾಡಿದ್ದಾನೆ.

View this post on Instagram

When Ryusei was 5years old

A post shared by Dragon Star-竜惺-??? (@ryusei416japan) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...