ವಿಶ್ವಕ್ಕೆ ವ್ಯಾಪಿಸಿರೋ ಕೊರೊನಾ ವೈರಸ್ ಎಲ್ಲರಿಗಿಂತ ಹೆಚ್ಚಾಗಿ ವೃದ್ಧರ ಪಾಲಿಗೆ ಜೀವ ಕಂಟಕವಾಗಿ ನಿಂತಿದೆ. ಈಗಾಗಲೇ ವಿಶ್ವದ ಅನೇಕ ವೃದ್ಧರು ಕೊರೊನಾ ವೈರಸ್ನಿಂದಾಗಿ ಪ್ರಾಣ ಬಿಟ್ಟಿದ್ದಾರೆ. ಹಾಗಂತ ಕೊರೊನಾ ಬಂದ ವೃದ್ಧರು ಬದುಕಿ ಉಳಿದೇ ಇಲ್ಲ ಅನ್ನೋ ಹಾಗೂ ಇಲ್ಲ. ಎಷ್ಟೋ ಮಂದಿ ವೃದ್ಧರು ಕೋವಿಡ್ ನಂತಹ ಡೆಡ್ಲಿ ವೈರಸ್ನ್ನೇ ಗೆದ್ದುಕೊಂಡು ಬಂದಿದ್ದಾರೆ.
ಈ ಮಾತಿಗೆ ಉದಾಹರಣೆ ಎಂಬಂತೆ ಬರೋಬ್ಬರಿ 103 ವರ್ಷದ ವೃದ್ಧೆಯೊಬ್ಬರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಕೊರೊನಾದಿಂದ ಗೆದ್ದು ಬಂದ ಜೆನ್ನಿ ಸ್ಟೆನ್ಜಾ ಬಿಯರ್ ಪಾರ್ಟಿ ಮೂಲಕ ಖುಷಿ ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ.
ಎರಡನೆಯ ಮಹಾಯುದ್ದದಿಂದ ಹಿಡಿದು ಈಗಿನ ಕೊರೊನಾ ವೈರಸ್ ಸಂಕಷ್ಟವನ್ನ 104 ವರ್ಷದ ಲ್ಯಾಪ್ಚೀಸ್ ಎಂಬವರು ಕಂಡಿದ್ದಾರೆ. ಮಾರ್ಚ್ 10ನೇ ತಾರೀಖಿನಂದು ವೃದ್ಧ ಲ್ಯಾಪ್ಚೀಸ್ಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಲ್ಯಾಪ್ಚೀಸ್ ಕೊರೊನಾ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. ಯುದ್ಧದ ಅನುಭವಿ 104 ವರ್ಷದ ವೃದ್ಧ ಕೊರೊನಾದಿಂದ ಮುಕ್ತರಾಗಿ ಬಂದ ಬಳಿಕ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.