alex Certify 45 ಗಂಡು ಮಕ್ಕಳಿದ್ದ ಸೌದಿ ಅರೇಬಿಯಾ ರಾಜನಿಗೆ 20ಕ್ಕಿಂತ ಹೆಚ್ಚು ಪತ್ನಿಯರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

45 ಗಂಡು ಮಕ್ಕಳಿದ್ದ ಸೌದಿ ಅರೇಬಿಯಾ ರಾಜನಿಗೆ 20ಕ್ಕಿಂತ ಹೆಚ್ಚು ಪತ್ನಿಯರು…!

ಸೌದಿ ಅರೇಬಿಯಾದ ರಾಜಮನೆತನ ಮತ್ತೊಮ್ಮೆ ಸುದ್ದಿಯಲ್ಲಿದೆ. ರಾಜಕುಮಾರಿ ಬಸ್ಮಾ ಬಿಂತೆ ಸೌದಿ  ದೀರ್ಘಕಾಲದಿಂದ ಜೈಲಿನಲ್ಲಿದ್ದಾರೆ. ಅವರು ಸೌದಿ ದೇಶದ ಸ್ಥಾಪಕನ ಮೊಮ್ಮಗಳು. ಸೌದಿ ದೇಶದ ಸ್ಥಾಪಕರು ಯಾರು ? ಮತ್ತು ಅವರ ಕುಟುಂಬ ಹೇಗಿತ್ತು ? ಎಂಬ ವಿವರ ಇಲ್ಲಿದೆ.

ಸೌದಿ ಅರೇಬಿಯಾದ ರಾಜನ ಹೆಸರು ರಾಜ ಅಬ್ದುಲ್ ಅಜೀಜ್. 1932 ರಲ್ಲಿ ಸೌದಿ ಅರೇಬಿಯಾವನ್ನು ಸ್ಥಾಪಿಸಿದರು. ಜನವರಿ 15,  1857 ರಂದು ಜನಿಸಿದ ಅವರು ನವೆಂಬರ್ 9,1953 ರಂದು ನಿಧನರಾದರು.1902ರಲ್ಲಿ ಪೂರ್ವಜರ ರಿಯಾದ್ ಗೆದ್ದ ಅವರು ಬಹುತೇಕ ಅರಬ್ ತನ್ನದಾಗಿಸಿಕೊಂಡಿದ್ದರು. 1932 ರಲ್ಲಿ ಸೌದಿ ಅರೇಬಿಯಾದ ರಾಜನಾದ್ಮೇಲೆ ತಮ್ಮ ಆಡಳಿತವನ್ನು ವಿಸ್ತರಿಸಿದರು.

ರಾಜನಾದ್ಮೇಲೆ ಅವರು 1938 ರಲ್ಲಿ ಸೌದಿ ಅರೇಬಿಯಾದಲ್ಲಿ ಪೆಟ್ರೋಲಿಯಂ ಕಂಡುಹಿಡಿದರು. ಎರಡನೆಯ ಮಹಾಯುದ್ಧದ ನಂತರ ಸಾಮೂಹಿಕ ತೈಲ ಉತ್ಪಾದನೆಯನ್ನು ಪ್ರಾರಂಭಿಸಿದರು. 18 ವರ್ಷಕ್ಕಿಂತ ಮೊದಲೇ ಮೊದಲ ಮದುವೆಯಾಗಿದ್ದ ರಾಜನ ಮೊದಲ ಪತ್ನಿ ಬೇಗ ಸಾವನ್ನಪ್ಪಿದ್ರು. ನಂತ್ರ 18ನೇ ವಯಸ್ಸಿನಲ್ಲಿ ಮದುವೆಯಾದ ರಾಜನಿಗೆ Turki Al Awwa ಹೆಸರಿನ ಮೊದಲ ಮಗ ಜನಿಸಿದ.

ರಾಜನಿಗೆ 22 ಪತ್ನಿಯರಿದ್ದರಂತೆ. 45 ಗಂಡು ಮಕ್ಕಳಿದ್ದರಂತೆ. ಅದ್ರಲ್ಲಿ ಪ್ರೀತಿಯ ರಾಣಿ ಹುಸಾ ಸುದಾಯರಿಗೆ ಹುಟ್ಟಿದ 7 ಗಂಡು ಮಕ್ಕಳ ಮೇಲೆ ರಾಜನಿಗೆ ಹೆಚ್ಚಿನ ಪ್ರೀತಿಯಿತ್ತು. `sudairi seven’ ಎಂದು ಕರೆಯಲಾಗ್ತಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...