ಇದ್ದಕ್ಕಿದ್ದಂತೆ ಅಲುಗಾಡಿದ ಗಗನಚುಂಬಿ ಕಟ್ಟಡ..! ದಿಕ್ಕಾಪಾಲಾಗಿ ಓಡಿದ ಜನ 20-05-2021 8:06AM IST / No Comments / Posted In: Latest News, International ಚೀನಾದ ಶೇನ್ಜೆನ್ ನಗರದಲ್ಲಿ ಗಗನ ಚುಂಬಿ ಕಟ್ಟಡವೊಂದು ಇದ್ದಕ್ಕಿದ್ದ ಹಾಗೆ ಅಲುಗಾಡಿದ್ದು ಎಲ್ಲರೂ ಶಾಕ್ ಆಗಿದ್ದಾರೆ. ಬರೋಬ್ಬರಿ 356 ಮೀಟರ್ ಎತ್ತರವಿರುವ ಎಸ್ಇಜಿ ಪ್ಲಾಜಾ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ರೀತಿ ಅಲುಗಾಡಿದೆ. ಕಟ್ಟಡ ಅಲುಗಾಡಲು ಆರಂಭಿಸುತ್ತಿದ್ದಂತೆಯೇ ಗಗನಚುಂಬಿ ಕಟ್ಟಡದ ಬಳಿಯಿದ್ದವರೆಲ್ಲ ಓಡಿ ಹೋಗಿದ್ದಾರೆ. ಭಯಗೊಂಡಿದ್ದ ಕಟ್ಟಡದ ಒಳಗಿದ್ದ ವ್ಯಾಪಾರಸ್ಥರನ್ನೂ ಸ್ಥಳಾಂತರಿಸಲಾಗಿದೆ. ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಮಧ್ಯಾಹ್ನ 2.30ರ ಸುಮಾರಿಗೆ ಕಟ್ಟಡವನ್ನ ಬಂದ್ ಮಾಡಲಾಗಿದೆ. ಈ ಗಗನಚುಂಬಿ ಕಟ್ಟಡವು ಈ ರೀತಿ ಅಲುಗಾಡಲು ಕಾರಣವೇನು ಅನ್ನೋದರ ಬಗ್ಗೆ ತನಿಖೆ ನಡೆಯುತ್ತಿದೆ. ಮಗನಿಗೆ ಬದನೆಕಾಯಿ ಗೊಜ್ಜು ತಿನಿಸಿದ ಪಕ್ಕದ ಮನೆಯಾಕೆಯ ಮೇಲೆ ಉರಿದುಬಿದ್ದ ತಾಯಿ ಈ ರೀತಿ ಕಟ್ಟಡವು ಅಲುಗಾಡಲು ಆರಂಭಿಸುತ್ತಿದ್ದಂತೆಯೇ ಈ ಭಾಗದಲ್ಲಿ ಭೂಕಂಪ ಸಂಭವಿಸಿದೆಯಾ ಎಂದು ಮೊದಲು ಪರೀಕ್ಷೆ ಮಾಡಲಾಯ್ತು. ಆದರೆ ಶೆನ್ಜೆನ್ ನಗರದಲ್ಲಿ ಯಾವುದೇ ಭೂಕಂಪ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೀಗ ವಿವಿಧ ಇಲಾಖೆ ಅಧಿಕಾರಿಗಳು ಕಟ್ಟಡ ಅಲುಗಾಡಲು ಕಾರಣವೇನು ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸರಿಸುಮಾರು 12 ದಶಲಕ್ಷ ಜನರನ್ನ ಹೊಂದಿರುವ ಈ ನಗರದ ಹೃದಯಭಾಗದಲ್ಲಿರುವ ಕಟ್ಟಡವನ್ನ ಅಧಿಕಾರಿಗಳು ಹೇಗೆ ದುರಂತ ಉಂಟಾಗೋದ್ರಿಂದ ಪಾರು ಮಾಡ್ತಾರೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಕಟ್ಟಡ ಅಲುಗಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. pic.twitter.com/tR8JdbkqiM — Shenzhen Pages (@ShenzhenPages) May 18, 2021 https://twitter.com/i/status/1394558949685284864