alex Certify ಸ್ವಿಮ್ಮಿಂಗ್ ಫೂಲ್ ನಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಿದ ಮೂರು ವರ್ಷದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಿಮ್ಮಿಂಗ್ ಫೂಲ್ ನಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಿದ ಮೂರು ವರ್ಷದ ಬಾಲಕ

ರಿಯೋ-ಡಿ-ಜನೈರೊ: ಈಜು ಕೊಳದಲ್ಲಿ ಮುಳುಗುತ್ತಿದ್ದ ತನ್ನ ಸ್ನೇಹಿತನನ್ನು ಮೂರು ವರ್ಷದ ಬಾಲಕನೊಬ್ಬ ರಕ್ಷಿಸುವ ಮೂಲಕ ಪ್ರಸಿದ್ಧನಾಗಿದ್ದಾನೆ.  ಬ್ರೆಜಿಲ್ನ ರಿಯೋ-ಡಿ-ಜನೈರೋದ ಉತ್ತರಕ್ಕಿರುವ ಇಟಾ ಪೆರುನಾ ಎಂಬಲ್ಲಿ ಘಟನೆ ನಡೆದಿದೆ.

ಆರ್ಥರ್ ಡೆ ಒಲಿವೆರಾ ಎಂಬ ಬಾಲಕ ತನ್ನ ಸ್ನೇಹಿತ ಹೆನ್ರಿಕ್ ನನ್ನು ಬಚಾವು ಮಾಡಿದ ವಿಡಿಯೋವನ್ನು ಆತನ ತಾಯಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾಳೆ.‌ ಘಟನೆ ನಡೆದ ಸಂದರ್ಭದಲ್ಲಿ ಮಕ್ಕಳು ಮಾತ್ರ ಈಜು ಕೊಳದಲ್ಲಿದ್ದರು.

ಅರ್ಥರ್ ಈಜು ಕೊಳದ ಸಮೀಪ ಆಡುತ್ತಿದ್ದ. ಆ ಸಂದರ್ಭದಲ್ಲಿ ತನ್ನ ತಾಯಿಯ ಕಣ್ಣು ತಪ್ಪಿಸಿ ಅಲ್ಲಿಗೆ ಬಂದ ಕೊಳದ ಮೇಲ್ವಿಚಾರಕನ ಪುತ್ರ ಹೆನ್ರಿಕ್ ನೀರಿನ ಮೇಲೆ ತೇಲುತ್ತಿದ್ದ ಜೀವ ರಕ್ಷಕ ಬಲೂನನ್ನು ಹಿಡಿಯಲು ಯತ್ನಿಸಿದ.

ಈ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದ. ಮೊದಲು ಆತಂಕಗೊಂಡು ಪಾಲಕರನ್ನು ಕರೆದ ಅರ್ಥರ್ ಕೊನೆಗೆ ತಾನೇ ತನ್ನ ಸ್ನೇಹಿತನಿಗೆ ಕೈ ಚಾಚಿ ಕಷ್ಟ ಪಟ್ಟು ಆತನನ್ನು ದಡಕ್ಕೆ ಎಳೆದುಕೊಳ್ಳುತ್ತಾನೆ. ಈ ಸಂದರ್ಭದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

ಮನೆಯಲ್ಲಿ ಈಜುಕೊಳ ಹೊಂದಿದವರು ಮಕ್ಕಳ ಬಗ್ಗೆ ಎಚ್ಚರ ವಹಿಸಿ ಎಂದು ಅರ್ಥರ್ ತಾಯಿ ಪೊಲಿನಾ ಕೊನ್ಸೊಲ್ ಡೆ ಒಲಿವೆರಾ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

Esse vídeo serve de alerta para quem tem piscina em casa e crianças. Graças a Deus o final é feliz, pois Deus mandou a terra sob meus cuidados meu filho, meu pequeno Arthur, um verdadeiro herói!!! Herói da vida real, meu orgulho. Arthur salvou a vida de seu amigo, salvou a alegria do sítio três corações. Foram 30 segundos de descuido, o filhinho do caseiro saiu de casa sozinho, sem avisar sua mãe e em direção à piscina. Não descuidem! No meu coração só gratidão pela vida do amiguinho do Arthur. E orgulho da atitude corajosa, rápida e cheia de amor do meu filho… Obrigada Deus!

Posted by Poliana Console de Oliveira on Sunday, August 16, 2020

Essa semana recebi no sítio heróis que vestem farda e sabem o quanto é difícil colocar a própria vida em risco pra salvar outra. Eles vivem isso diariamente! E quando viram o vídeo que postei semana passada do Arthur que ainda tão pequenino, com apenas 3 Anos, com a bravura de um adulto, tirando seu amiguinho que estava afogando na piscina. Com esse sentimento de admiração, como todos nós ficamos com a atitude dele, Arthur recebeu deles carinho em forma de reconhecimento. Eu deixo aqui meus agradecimentos a Polícia Militar de Itaperuna, na pessoa do sargento Silvino o carinho para com meu filho.

Posted by Poliana Console de Oliveira on Thursday, August 20, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...