alex Certify 2021ರ ವೇಳೆಗೆ ಶ್ರೀಮಂತ ದೇಶಗಳು ಕೊರೊನಾ ಮುಕ್ತ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2021ರ ವೇಳೆಗೆ ಶ್ರೀಮಂತ ದೇಶಗಳು ಕೊರೊನಾ ಮುಕ್ತ…?

Bill Gates

ಕೊರೊನಾ ವೈರಸ್ ಲಸಿಕೆ ಶೀಘ್ರವೇ ಬಂದಲ್ಲಿ 2021 ರ ವೇಳೆಗೆ, ಶ್ರೀಮಂತ ದೇಶಗಳ ಜೀವನವು ಸಾಮಾನ್ಯ ಸ್ಥಿತಿಗೆ ಬರಬಹುದು ಎಂದು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಹೇಳಿದ್ದಾರೆ.  ವಾಲ್ ಸ್ಟ್ರೀಟ್ ಜರ್ನಲ್‌ಗೆ ನೀಡಿದ ಸಂದರ್ಶನದಲ್ಲಿ, ಬಿಲ್ ಗೇಟ್ಸ್,  ಪ್ರಸ್ತುತ ಯುಎಸ್‌ನಲ್ಲಿ ಪರೀಕ್ಷೆಗೊಳಗಾಗ್ತಿರುವ ಲಸಿಕೆಯ ಯಶಸ್ಸನ್ನು ಖಾತರಿಪಡಿಸುವುದಿಲ್ಲ ಎಂದಿದ್ದಾರೆ.

ಲಸಿಕೆ ಯಶಸ್ಸಿನ ಬಗ್ಗೆ ಖಾತರಿ ನೀಡದಿದ್ದರೂ, ಲಸಿಕೆ ಪಡೆಯುವಲ್ಲಿ ಜನರು ಹಿಂದುಳಿಯದಂತೆ ಲಸಿಕೆಯ ಸುರಕ್ಷತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಮಂಗಳವಾರ ಡಬ್ಲ್ಯುಎಚ್‌ಒ ತಿಳಿಸಿದೆ.

ಅಮೆರಿಕಾದಲ್ಲಿ ಫಿಜರ್, ಅಸ್ಟ್ರಾಜೆಂಕಾ ಮತ್ತು ಮೊಡೆರ್ನಾ ಸೇರಿದಂತೆ ಕೆಲ ಕಂಪನಿಗಳು ಲಸಿಕೆ  ಪ್ರಯೋಗ ಮಾಡ್ತಿವೆ. ಆರಂಭಿಕ ಪ್ರಯೋಗದಲ್ಲಿ ಈ ಲಸಿಕೆಗಳ ಫಲಿತಾಂಶಗಳು ಉತ್ತಮವಾಗಿವೆ. ಆದ್ರೆ ಎಲ್ಲ ಲಸಿಕೆ ಯಶಸ್ವಿಯಾಗುತ್ತೆ ಎಂದು ತಜ್ಞರು ದೃಢಪಡಿಸಿಲ್ಲ. ಕೊರೊನಾ ವೈರಸ್ ಸೋಂಕು ಸಂಪೂರ್ಣವಾಗಿ ಕೊನೆಗೊಳ್ಳಲು  2 ರಿಂದ 3 ವರ್ಷಗಳು ಬೇಕಾಗುತ್ತದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ. ಲಸಿಕೆ ಶೀಘ್ರವೇ ಮಾರುಕಟ್ಟೆಗೆ ಬಂದರೆ ಮುಂದಿನ ವರ್ಷದ ಅಂತ್ಯದ ವೇಳೆಗೆ ಶ್ರೀಮಂತ ದೇಶಗಳ ಜನ ಜೀವನವು ಸಾಮಾನ್ಯವಾಗಲಿದೆ. ಹೆಚ್ಚಿನ ಶ್ರೀಮಂತ ರಾಷ್ಟ್ರಗಳು ಈಗಾಗಲೇ ಲಸಿಕೆಗಾಗಿ ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿವೆ. ಲಸಿಕೆ ವಿತರಣೆಯ ಉತ್ತಮ ವ್ಯವಸ್ಥೆಯನ್ನು ಅವರು ಹೊಂದಿದ್ದಾರೆ. ಜನಸಂಖ್ಯೆಯು ಭಾರತ ಮತ್ತು ಚೀನಾಕ್ಕಿಂತಲೂ ಕಡಿಮೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...