alex Certify 20 ನಿಮಿಷದಲ್ಲಿ ಕೊರೊನಾ ಪರೀಕ್ಷೆ ನಡೆಸಲಿದೆ ಈ ಕಿಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ನಿಮಿಷದಲ್ಲಿ ಕೊರೊನಾ ಪರೀಕ್ಷೆ ನಡೆಸಲಿದೆ ಈ ಕಿಟ್

ಯುಕೆ ಸರ್ಕಾರ ಕೊರೊನಾ ವೈರಸ್ ಪ್ರತಿಕಾಯ ಪರೀಕ್ಷೆ ಕಿಟ್ ನ್ನು ಲಕ್ಷಾಂತರ ಮಂದಿಗೆ ಉಚಿತವಾಗಿ ವಿತರಿಸಲು ಯೋಚಿಸುತ್ತಿದೆ ಎಂದು ಡೇಲಿ ಟೆಲಿಗ್ರಾಂ ಸಮಾಚಾರ್ ವರದಿ ಮಾಡಿದೆ. ಜೂನ್‌ನಲ್ಲಿ ನಡೆಸಿದ ರಹಸ್ಯ ಮಾನವ ಪ್ರಯೋಗಗಳಲ್ಲಿ ಒಬ್ಬ ವ್ಯಕ್ತಿಯು ಕೊರೊನೊ ವೈರಸ್‌ಗೆ ತುತ್ತಾಗಿದ್ದಾನಾ ಎಂಬುದನ್ನು ಈ ಕಿಟ್ ಮೂಲಕ ಪತ್ತೆ ಮಾಡಬಹುದು. ಕೇವಲ 20 ನಿಮಿಷಗಳಲ್ಲಿ  ಹೇಳಬಲ್ಲ ಫಿಂಗರ್‌ಪ್ರಿಂಟ್ ಪರೀಕ್ಷೆಗಳು ಶೇಕಡಾ 98.6ರಷ್ಟು ಯಶಸ್ವಿಯಾಗಿವೆ.

ಈ ಪರೀಕ್ಷೆಯನ್ನು ಯುಕೆ ರಾಪಿಡ್ ಟೆಸ್ಟ್ ಕನ್ಸೋರ್ಟಿಯಂ ಅಭಿವೃದ್ಧಿಪಡಿಸಿದೆ. ಇದು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಪ್ರಮುಖ ಯುಕೆ ರೋಗನಿಯಂತ್ರಣ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ ನಡೆದಿದೆ.

ವರ್ಷಾಂತ್ಯದ ಮೊದಲು, ಸಾಮೂಹಿಕ ಸ್ಕ್ರೀನಿಂಗ್ ಕಾರ್ಯಕ್ರಮದಲ್ಲಿ ಬಳಸಲು ಎಬಿಸಿ -19 ಲ್ಯಾಟರಲ್ ಫ್ಲೋ ಟೆಸ್ಟ್ ಲಭ್ಯವಾಗಲಿದೆ ಎಂದು ಸಚಿವರು ಭರವಸೆ ಹೊಂದಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಲಕ್ಷಾಂತರ ಕಿಟ್ ತಯಾರಿಸಲು ಯೋಜನೆ ರೂಪಿಸಲಾಗಿದೆ. ಪರೀಕ್ಷೆಯನ್ನು ಉಚಿತವಾಗಿಡಲು ಮತ್ತು ಸೂಪರ್‌ಮಾರ್ಕೆಟ್‌ ಬದಲು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಸೂಚನೆ ನೀಡುವ ಸಾಧ್ಯತೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...