ವಿಮಾನನಿಲ್ದಾಣದಲ್ಲಿ ಅನುಮತಿಯಿಲ್ಲದೇ ಫೋಟೋ ಕ್ಲಿಕ್ಕಿಸುತ್ತಿದ್ದ ವ್ಯಕ್ತಿಯನ್ನ ಇಬ್ಬರು ಯುವತಿಯರು ತರಾಟೆಗೆ ತೆಗೆದುಕೊಂಡಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಯುವತಿಯರು ಅಪರಿಚಿತ ವ್ಯಕ್ತಿಯ ಬಳಿ ಬಂದು ಫೋಟೋಗಳನ್ನ ಡಿಲೀಟ್ ಮಾಡುವಂತೆ ಹೇಳಿದ್ದಾರೆ.
ನಾವೇಕೆ ಇಷ್ಟೊಂದು ಅಸಮಾಧಾನ ಹೊರಹಾಕುತ್ತಿದ್ದೇವೆ ಎಂಬುದು ಅನೇಕರಿಗೆ ಅರ್ಥವೇ ಆಗೋದಿಲ್ಲ ಎಂದು ಅನೇಕರಿಗೆ ತಿಳಿದಿದೆ. ಆದರೆ ಈ ರೀತಿಯ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ ಎಂದು ಟಿಕ್ಟಾಕ್ನಲ್ಲಿ ವಿಡಿಯೋ ಶೇರ್ ಮಾಡಿ ಬೈಲ್ಜೆರ್ಬ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಶೇವಿಂಗ್ ಕ್ರೀಂ ಎಂದುಕೊಂಡು ಹೇರ್ ರಿಮೂವಲ್ ಕ್ರೀಂ ಹಚ್ಚಿಕೊಂಡ ಭೂಪ..!
ಈ ವಿಡಿಯೋದಲ್ಲಿ ಬೈಜೆಬ್ ಹಾಗೂ ಅವರ ಗೆಳತಿ ನಡೆದುಕೊಂಡು ಹೋಗ್ತಿದ್ದ ವೇಳೆ ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದ ಮಧ್ಯ ವಯಸ್ಸಿನ ಪುರುಷ ಫೋಟೋ ಕ್ಲಿಕ್ಕಿಸಿದ್ದ. ಈ ಬಗ್ಗೆ ಆತನನ್ನ ವಿಚಾರಿಸಿದ ವೇಳೆ ಆತ ಫೋಟೋ ತೆಗೆದಿಲ್ಲ ಎಂದು ಹೇಳಿದ್ದಾನೆ.
ಫೋಟೋಗಳನ್ನ ತೋರಿಸು ಎಂದು ಹೇಳಿದಾಕ್ಷಣ ಆತ ಅಲ್ಲಿಂದ ಕಾಲ್ಕಿಳಲು ಯತ್ನಿಸಿದ್ದಾನೆ. ಆದರೆ ಈ ಯುವತಿಯರಲ್ಲಿ ಒಬ್ಬರು, ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಫೋಟೋಗಳನ್ನ ಕ್ಲಿಕ್ಕಿಸೋದು ತುಂಬಾನೇ ತಪ್ಪು. ಈ ರೀತಿಯ ಕೆಲಸವನ್ನ ಮತ್ತೆ ಮಾಡಬೇಡಿ. ಒಂದು ವೇಳೆ ನಾವೇ ನಿಮ್ಮ ಮಕ್ಕಳಾಗಿದ್ದು ನಿಮ್ಮ ಜಾಗದಲ್ಲಿ ಬೇರೆ ಪುರುಷರಿದ್ದಿದ್ದರೆ ಸಹಿಸುತ್ತಿದ್ರಾ ಎಂದು ಪ್ರಶ್ನೆ ಮಾಡಿದ್ದಾರೆ.
ಕೊನೆಗೂ ಆ ವ್ಯಕ್ತಿಯ ಮೊಬೈಲ್ನಿಂದ ಎಲ್ಲಾ ಫೋಟೋಗಳನ್ನ ಡಿಲೀಟ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವತಿಯರ ಧೈರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿದೆ.