alex Certify ಅನುಮತಿಯಿಲ್ಲದೆ ಫೋಟೋ ಕ್ಲಿಕ್ಕಿಸಿದವನಿಗೆ ಯುವತಿಯರಿಂದ ಹಿಗ್ಗಾಮುಗ್ಗಾ ತರಾಟೆ​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನುಮತಿಯಿಲ್ಲದೆ ಫೋಟೋ ಕ್ಲಿಕ್ಕಿಸಿದವನಿಗೆ ಯುವತಿಯರಿಂದ ಹಿಗ್ಗಾಮುಗ್ಗಾ ತರಾಟೆ​..!

ವಿಮಾನನಿಲ್ದಾಣದಲ್ಲಿ ಅನುಮತಿಯಿಲ್ಲದೇ ಫೋಟೋ ಕ್ಲಿಕ್ಕಿಸುತ್ತಿದ್ದ ವ್ಯಕ್ತಿಯನ್ನ ಇಬ್ಬರು ಯುವತಿಯರು ತರಾಟೆಗೆ ತೆಗೆದುಕೊಂಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಯುವತಿಯರು ಅಪರಿಚಿತ ವ್ಯಕ್ತಿಯ ಬಳಿ ಬಂದು ಫೋಟೋಗಳನ್ನ ಡಿಲೀಟ್​ ಮಾಡುವಂತೆ ಹೇಳಿದ್ದಾರೆ.

ನಾವೇಕೆ ಇಷ್ಟೊಂದು ಅಸಮಾಧಾನ ಹೊರಹಾಕುತ್ತಿದ್ದೇವೆ ಎಂಬುದು ಅನೇಕರಿಗೆ ಅರ್ಥವೇ ಆಗೋದಿಲ್ಲ ಎಂದು ಅನೇಕರಿಗೆ ತಿಳಿದಿದೆ. ಆದರೆ ಈ ರೀತಿಯ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ ಎಂದು ಟಿಕ್​ಟಾಕ್​ನಲ್ಲಿ ವಿಡಿಯೋ ಶೇರ್​ ಮಾಡಿ ಬೈಲ್​ಜೆರ್ಬ್​ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಶೇವಿಂಗ್​ ಕ್ರೀಂ ಎಂದುಕೊಂಡು ಹೇರ್​ ರಿಮೂವಲ್​ ಕ್ರೀಂ ಹಚ್ಚಿಕೊಂಡ ಭೂಪ..!

ಈ ವಿಡಿಯೋದಲ್ಲಿ ಬೈಜೆಬ್​ ಹಾಗೂ ಅವರ ಗೆಳತಿ ನಡೆದುಕೊಂಡು ಹೋಗ್ತಿದ್ದ ವೇಳೆ ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದ ಮಧ್ಯ ವಯಸ್ಸಿನ ಪುರುಷ ಫೋಟೋ ಕ್ಲಿಕ್ಕಿಸಿದ್ದ. ಈ ಬಗ್ಗೆ ಆತನನ್ನ ವಿಚಾರಿಸಿದ ವೇಳೆ ಆತ ಫೋಟೋ ತೆಗೆದಿಲ್ಲ ಎಂದು ಹೇಳಿದ್ದಾನೆ.

ಫೋಟೋಗಳನ್ನ ತೋರಿಸು ಎಂದು ಹೇಳಿದಾಕ್ಷಣ ಆತ ಅಲ್ಲಿಂದ ಕಾಲ್ಕಿಳಲು ಯತ್ನಿಸಿದ್ದಾನೆ. ಆದರೆ ಈ ಯುವತಿಯರಲ್ಲಿ ಒಬ್ಬರು, ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಫೋಟೋಗಳನ್ನ ಕ್ಲಿಕ್ಕಿಸೋದು ತುಂಬಾನೇ ತಪ್ಪು. ಈ ರೀತಿಯ ಕೆಲಸವನ್ನ ಮತ್ತೆ ಮಾಡಬೇಡಿ. ಒಂದು ವೇಳೆ ನಾವೇ ನಿಮ್ಮ ಮಕ್ಕಳಾಗಿದ್ದು ನಿಮ್ಮ ಜಾಗದಲ್ಲಿ ಬೇರೆ ಪುರುಷರಿದ್ದಿದ್ದರೆ ಸಹಿಸುತ್ತಿದ್ರಾ ಎಂದು ಪ್ರಶ್ನೆ ಮಾಡಿದ್ದಾರೆ.

ಕೊನೆಗೂ ಆ ವ್ಯಕ್ತಿಯ ಮೊಬೈಲ್​ನಿಂದ ಎಲ್ಲಾ ಫೋಟೋಗಳನ್ನ ಡಿಲೀಟ್​ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವತಿಯರ ಧೈರ್ಯಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿದೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...