ಬೆಲ್ಜಿಯಂ ರಾಜಧಾನಿ ಬ್ರುಸೆಲ್ನ ಪುರಸಭೆ ಕಟ್ಟಡದಲ್ಲಿ ದಶಕಗಳ ಕಾಲ ತೂಗು ಹಾಕಲಾಗಿದ್ದ ಕಲಾಕೃತಿ, ವರ್ಣಚಿತ್ರಕಾರ ಫ್ಲೆಮಿಶ್ ಮಾಸ್ಟರ್ ಜಾಕೋಬ್ ಜೋರ್ಡಾನ್ಸ್ಗೆ ಸೇರಿದ್ದು ಅಂತಾ ಬೆಲ್ಜಿಯಂ ಸಂರಕ್ಷಣಾಧಿಕಾರಿಗಳು ದೃಢೀಕರಿಸಿದ್ದಾರೆ.
ಇದು 17ನೇ ಶತಮಾನದ ಆರಂಭದಲ್ಲಿ ಚಿತ್ರಿಸಿದ ಜೋರ್ಡಾನ್ಸ್ ಬರೆದ ದಿ ಹೋಲಿ ಫ್ಯಾಮಿಲಿಯ ಅತ್ಯಂತ ಹಳೆಯ ಆವೃತ್ತಿಯೆಂದು ತಜ್ಞರು ನಿರ್ಧರಿಸಿದ್ದಾರೆ.
ಸೇಂಟ್ ಗಿಲ್ಲೆಸ್ನ ಬ್ರುಸೆಲ್ಸ್ನ ಸಾಂಸ್ಕೃತಿಕ ಆಸ್ತಿಯ ದಾಸ್ತಾನು ವಿಭಾಗದ ಅಂತಾರಾಷ್ಟ್ರೀಯ ತಜ್ಞರ ಸಹಾಯದಿಂದ ರಾಯಲ್ ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ಹೆರಿಟೇಜ್ ಈ ನಂಬಲಾಗದ ಆವಿಷ್ಕಾರವನ್ನ ಮಾಡಿದೆ.
1960 ದಶಕದಿಂದಲೂ ಸೇಂಟ್ ಗಿಲ್ಲೆಸ್ ಮುನ್ಸಿಪಲ್ ಹಾಲ್ನಲ್ಲಿರುವ ಕಚೇರಿಯಲ್ಲಿ ಈ ಚಿತ್ರಕಲೆ ಇರಿಸಲಾಗಿದೆ.