alex Certify ಅಪಹರಣಕಾರನ ವಿರುದ್ಧ ಹೋರಾಡಿ ಗೆದ್ದ 11 ವರ್ಷದ ಪುಟ್ಟ ಪೋರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಹರಣಕಾರನ ವಿರುದ್ಧ ಹೋರಾಡಿ ಗೆದ್ದ 11 ವರ್ಷದ ಪುಟ್ಟ ಪೋರಿ….!

ಅಮೆರಿಕದ 11 ವರ್ಷದ ಪುಟ್ಟ ಬಾಲಕಿಯೊಬ್ಬಳು ಅಪಹರಣಕಾರನ ಎದುರು ಹೋರಾಡಿ ಆತನ ಕೈನಿಂದ ಪಾರಾಗಿದ್ದು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದಾರೆ.

ಫ್ಲೋರಿಡಾದಲ್ಲಿ ಬೆಳಗಿನ ಜಾವ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಅಲ್ಲೇ ಇದ್ದ ಗಸ್ತು ಕ್ಯಾಮರಾದಲ್ಲಿ ಈ ಸಂಪೂರ್ಣ ದೃಶ್ಯ ಸೆರೆಯಾಗಿದೆ.

ಕಳೆದ ವಾರ ನಡೆದ ಘಟನೆ ಇದಾಗಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ಸದ್ದು ಮಾಡ್ತಿದೆ.

ವಿಡಿಯೋದಲ್ಲಿ ಬಾಲಕಿಯೊಬ್ಬಳು ಒಂಟಿಯಾಗಿ ನಿಂತಿದ್ದಳು. ಕಾರಿನಲ್ಲಿ ಬಂದಿಳಿದ ಪುರುಷನೋರ್ವ ಬಾಲಕಿಯನ್ನ ಎಳೆಯಲು ಯತ್ನಿಸಿದ್ದಾನೆ. ಆತ ಆಕೆಯನ್ನ ಸ್ವಲ್ಪ ದೂರ ಹೊತ್ತುಕೊಂಡು ಬಂದಿದ್ದಾನೆ. ಆದರೆ ಆಕೆ ಆತ ಆಕೆಯನ್ನ ಕೈಬಿಡುವವರೆಗೂ ಕಾಲು ಹಾಗೂ ಕೈಗಳಿಂದ ಜೋರಾಗಿ ಬಾರಿಸಿದ್ದಾಳೆ. ಇನ್ನು ಬಾಲಕಿಯನ್ನ ಹಿಡಿಯೋದು ಸಾಧ್ಯವಿಲ್ಲ ಎನಿಸಿದ ಪುರುಷ ಆಕೆಯನ್ನ ಅಲ್ಲೇ ಬಿಟ್ಟು ಕಾರು ಹತ್ತಿ ಪರಾರಿಯಾಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಯನ್ನ ಗಳಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...