alex Certify 103 ವರ್ಷದ ವರನಿಗೆ 37ರ ವಧು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

103 ವರ್ಷದ ವರನಿಗೆ 37ರ ವಧು…!

103 साल का दूल्हा, 37 की दुल्हन, दहेज की रकम कर देगी हैरान!

ಇಂಡೋನೇಷ್ಯಾದಲ್ಲಿ 103 ವರ್ಷ ವಯಸ್ಸಿನ ವೃದ್ಧನೊಬ್ಬನ ಮದುವೆ ಚರ್ಚೆಯಲ್ಲಿದೆ. ಈತ 66 ವರ್ಷ ಚಿಕ್ಕ ವಯಸ್ಸಿನ ಹುಡುಗಿ ಕೈ ಹಿಡಿದಿದ್ದಾನೆ. 103 ವರ್ಷದ ಪುವಾಂಗ್ ಕಟ್ಟೆ 37 ವರ್ಷದ ಇಂಡೋ ಅಲ್ಲಾಂಗ್ ಅವರನ್ನು ವಿವಾಹವಾಗಿದ್ದಾನೆ. ಮದುವೆಯ ಫೋಟೋಗಳು ಫೇಸ್ಬುಕ್ ಮತ್ತು ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ಇದಕ್ಕೆ ವಿರೋಧವೂ ವ್ಯಕ್ತವಾಗಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಪುವಾಂಗ್ ಡಚ್ ಕರ್ನಲ್ ಆಗಿದ್ದು, ಅವರು 1945-1949ರಲ್ಲಿ ಹೋರಾಡಿದರು. ಪುವಾಂಗ್ ವಯಸ್ಸು ಸರಿಯಾಗಿ ತಿಳಿದಿಲ್ಲ. 100 ವರ್ಷ ದಾಟಿದೆ ಎಂದು ಅಲ್ಲಾಂಗ್ ಸಂಬಂಧಿ ಹೇಳಿದ್ದಾರೆ. ಮದುವೆ ನಂತ್ರ ಟ್ರಿಬ್ಯೂನ್ ನ್ಯೂಸ್ ದಂಪತಿ  ನಿಜವಾದ ವಯಸ್ಸನ್ನು ಬಹಿರಂಗಪಡಿಸಿದೆ. ವಧು-ವರರ ವಯಸ್ಸಿನ ನಡುವಿನ ಅಂತರ ಚರ್ಚೆಗೆ ಕಾರಣವಾಗಿದೆ.

ಪುವಾಂಗ್ ಹುಡುಗಿ ಕಡೆಯವರಿಗೆ 25 ಸಾವಿರ ರೂಪಾಯಿ ವಧು ದಕ್ಷಿಣೆ ಹಾಗೂ ಚಿನ್ನದ ಉಂಗುರವನ್ನು ನೀಡಿದ್ದಾನಂತೆ. ಇಬ್ಬರು ಪುವಾಂಗ್ ಮನೆಯಲ್ಲಿ ವಾಸವಾಗಿದ್ದಾರೆ ಎನ್ನಲಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...