alex Certify ವಿಶ್ವದ ಸೂಪರ್ ಪವರ್ ರಾಷ್ಟ್ರವಾಗಲು ಬೇಕೆಂದೇ ಕೊರೊನಾ ವೈರಸ್ ಬಿಟ್ಟ ಚೀನಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಸೂಪರ್ ಪವರ್ ರಾಷ್ಟ್ರವಾಗಲು ಬೇಕೆಂದೇ ಕೊರೊನಾ ವೈರಸ್ ಬಿಟ್ಟ ಚೀನಾ…!

ಮಾರಣಾಂತಿಕ ಕೊರೊನಾ ವೈರಸ್ ಮೊಟ್ಟಮೊದಲಿಗೆ ಚೀನಾದ ವುಹಾನ್ ನಗರದಲ್ಲಿ ಆರಂಭವಾಗಿದ್ದು, ಇದೀಗ ಇಡಿ ವಿಶ್ವವನ್ನೇ ವ್ಯಾಪಿಸಿದೆ. ಈ ಮಹಾಮಾರಿಯ ನಿಯಂತ್ರಣಕ್ಕಾಗಿ ಬಹುತೇಕ ಎಲ್ಲ ರಾಷ್ಟ್ರಗಳು ಲಾಕ್ ಡೌನ್ ಜಾರಿಗೊಳಿಸಿದ್ದು, ಇದರ ಪರಿಣಾಮವಾಗಿ ತೀವ್ರ ಆರ್ಥಿಕ ಹೊಡೆತವನ್ನು ಅನುಭವಿಸುತ್ತಿವೆ.

ಅಚ್ಚರಿಯ ಸಂಗತಿಯೆಂದರೆ ಈ ಸೋಂಕಿನಿಂದ ಚೀನಾ ಈಗಾಗಲೇ ಚೇತರಿಸಿಕೊಂಡಿದ್ದು, ವುಹಾನ್ ನಗರ ಸೇರಿದಂತೆ ದೇಶದಲ್ಲಿ ಎಲ್ಲ ಬಗೆಯ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಿದೆ. ಇದರ ಜೊತೆಗೆ ಕೊರೊನಾ ಸಂಕಷ್ಟ ಎದುರಿಸುತ್ತಿದ್ದ ಸಂದರ್ಭದಲ್ಲಿ ಅಮೆರಿಕಾ, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಚೀನಾ ಹೂಡಿಕೆ ಮಾಡಿದೆ.

ಕೊರೊನಾ ವೈರಸ್ ವುಹಾನ್ ನಗರದ ಪ್ರಾಣಿಗಳ ಮಾರುಕಟ್ಟೆಯಿಂದ ಆರಂಭವಾಗಿದೆ ಎಂದು ಚೀನಾ ಹೇಳುತ್ತಿದ್ದರೂ ಇದನ್ನು ನಂಬಲು ಬಹುತೇಕ ರಾಷ್ಟ್ರಗಳು ಸಿದ್ಧವಿಲ್ಲ. ಅದರಲ್ಲೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಈ ವೈರಸ್ ಸೃಷ್ಟಿಕರ್ತ ಎಂದು ನೇರವಾಗಿ ಆರೋಪಿಸಿದ್ದಾರೆ.

ಇದಕ್ಕೆ ಪುಷ್ಟಿ ನೀಡುವಂತೆ ಕೊರೊನಾ ವೈರಸ್ ಚೀನಾದಲ್ಲಿ ಕಾಣಿಸಿಕೊಂಡಾಗ ದೇಶದಲ್ಲಿ ಇದರ ನಿಯಂತ್ರಣಕ್ಕೆ ಎಲ್ಲ ಕ್ರಮ ಕೈಗೊಂಡ ಚೀನಾ, ಸೋಂಕು ಹರಡುವಿಕೆ ಕುರಿತಂತೆ ವಿಶ್ವದ ಇತರ ರಾಷ್ಟ್ರಗಳಿಗೆ ಯಾವುದೇ ಎಚ್ಚರಿಕೆ ನೀಡಲಿಲ್ಲ. ಅಲ್ಲದೆ ಚೀನಾದಿಂದ ಹಾರಾಟ ನಡೆಸುವ ಅಂತರಾಷ್ಟ್ರೀಯ ವಿಮಾನಗಳ ಸಂಚಾರವನ್ನು ನಿಲ್ಲಿಸಲಿಲ್ಲ. ಇದರ ಪರಿಣಾಮವಾಗಿ ವಿಶ್ವದ ಎಲ್ಲೆಡೆ ಕೊರೊನಾ ವೈರಸ್ ವ್ಯಾಪಿಸಿದ್ದು, ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಲು ಚೀನಾ ಬೇಕೆಂದೇ ಈ ವೈರಸ್ ಸೃಷ್ಟಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಚೀನಾದ ಈ ಕುಟಿಲ ನೀತಿಯಿಂದಾಗಿ ಈಗ ವಿಶ್ವದ ಎಲ್ಲಾ ರಾಷ್ಟ್ರಗಳು ತೊಂದರೆ ಅನುಭವಿಸುವಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...