alex Certify ವಿಚ್ಛೇದನದ ಹಿಂದಿನ ಕಾರಣ ಬಿಚ್ಚಿಟ್ಟ ವಿಶ್ವದ ಸಿರಿವಂತ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚ್ಛೇದನದ ಹಿಂದಿನ ಕಾರಣ ಬಿಚ್ಚಿಟ್ಟ ವಿಶ್ವದ ಸಿರಿವಂತ ದಂಪತಿ

ಮೈಕ್ರೋಸಾಫ್ಟ್​ ಸ್ಥಾಪಕ ಬಿಲ್​ ಗೇಟ್ಸ್​​ ಹಾಗೂ ಅವರ ಪತ್ನಿ ಮೆಲಿಂಡಾ ತಮ್ಮ 27 ವರ್ಷದ ದಾಂಪತ್ಯವನ್ನ ಕೊನೆಗಾಣಿಸುತ್ತಿರುವ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

ವಿಶ್ವದ ಶ್ರೀಮಂತ ದಂಪತಿಯಲ್ಲಿ ಒಬ್ಬರಾದ ಗೇಟ್ಸ್​ ಹಾಗೂ ಮಿಲಿಂಡಾ ಜಂಟಿಯಾಗಿ 130 ಬಿಲಿಯನ್​ ಡಾಲರ್ ಸಂಪತ್ತನ್ನ ಹೊಂದಿದ್ದಾರೆ. ಗೇಟ್ಸ್​ ವಿಶ್ವಾದ್ಯಂತ ಶತಕೋಟಿಗೂ ಹೆಚ್ಚು ಹಣವನ್ನ ಸಾಮಾಜಿಕ ಕಾರ್ಯಕ್ಕೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ.

ಟ್ವಿಟರ್​ನಲ್ಲಿ ವಿಚ್ಛೇದನದ ಕುರಿತಂತೆ ಮಾಹಿತಿ ನೀಡಿರುವ ದಂಪತಿ, ಬಿಲ್​ & ಮೆಲಿಂಡಾ ಗೇಟ್ಸ್​ ಫೌಂಡೇಶನ್​​ನಲ್ಲಿ ಡಿವೋರ್ಸ್ ಬಳಿಕವೂ ಒಟ್ಟಾಗಿ ಕಾರ್ಯನಿರ್ವಹಿಸಲಿದ್ದೇವೆ ಎಂದು ಹೇಳಿದ್ದಾರೆ. ಈ ಫೌಂಡೇಷನ್​ ಮೂಲಕ ಜಾಗತಿಕ ಆರೋಗ್ಯ, ಲಿಂಗ ಸಮಾನತೆ, ಶಿಕ್ಷಣ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ಕೆ ದೇಣಿಗೆ ನೀಡಲಾಗುತ್ತೆ.

ನಮ್ಮ ಸಂಬಂಧದ ಬಗೆಗಿನ ಹೆಚ್ಚುವರಿ ಚಿಂತನೆಯ ಬಳಿಕ ನಾವು ಈ ಮದುವೆಯ ಬಂಧವನ್ನ ಕೊನೆಗಾಣಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಟ್ವಿಟರ್​ನಲ್ಲಿ ಜಂಟಿ ಪ್ರಕಟಣೆ ನೀಡಿದ್ದಾರೆ.

ಕಳೆದ 27 ವರ್ಷಗಳಿಂದ ಜೊತೆಯಲಿದ್ದ ನಾವು ಮೂವರು ಮಕ್ಕಳನ್ನ ಒಳ್ಳೆಯ ರೀತಿಯಲ್ಲಿ ಬೆಳೆಸಿದ್ದೇವೆ ಹಾಗೂ ಫೌಂಡೇಶನ್​ ಮೂಲಕ ಸಾಮಾಜಿಕ ಸೇವೆಯನ್ನೂ ಮಾಡಿದ್ದೇವೆ. ಈ ಫೌಂಡೇಷನ್​ ಮೂಲಕ ನಾವು ಮುಂದೆಯೂ ಜಾಗತಿಕ ಮಟ್ಟದಲ್ಲಿ ನಮ್ಮ ಸೇವೆಯನ್ನ ನೀಡಲಿದ್ದೇವೆ. ಆದರೆ ಈ ಹಂತದಲ್ಲಿ ನಾವಿಬ್ಬರು ದಂಪತಿಯಾಗಿ ಒಳ್ಳೆ ರೀತಿಯಲ್ಲಿ ನಡೆದುಕೊಂಡು ಹೋಗುತ್ತೇವೆ ಎಂಬ ನಂಬಿಕೆ ನಮ್ಮಲ್ಲಿ ಉಳಿದಿಲ್ಲ.

ಹೊಸ ಜೀವನವನ್ನ ಆರಂಭಿಸಲು ಹೊರಡುತ್ತಿರುವ ಈ ಸಂದರ್ಭದಲ್ಲಿ ದಯಮಾಡಿ ನಮ್ಮ ಕುಟುಂಬದ ಖಾಸಗಿತನಕ್ಕೆ ಧಕ್ಕೆ ಮಾಡದಿರಿ ಎಂದು ಮನವಿ ಮಾಡುತ್ತೇವೆ ಎಂದು ಬರೆಯಲಾಗಿದೆ.

ಮೆಲಿಂಡಾ ಗೇಟ್ಸ್ ಹಾಗೂ ಬಿಲ್​ ಗೇಟ್ಸ್ ದಂಪತಿ ಒಬ್ಬರನ್ನೊಬ್ಬರು 1987ರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು ಹಾಗೂ 1994ಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

— Bill Gates (@BillGates) May 3, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...