alex Certify ಮಾಸ್ಕ್ ಧರಿಸದಿದ್ದರೆ ದಂಡ ಮಾತ್ರವಲ್ಲ ಜೈಲು ಶಿಕ್ಷೆಯೂ ಗ್ಯಾರಂಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಧರಿಸದಿದ್ದರೆ ದಂಡ ಮಾತ್ರವಲ್ಲ ಜೈಲು ಶಿಕ್ಷೆಯೂ ಗ್ಯಾರಂಟಿ

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಬಹುತೇಕ ಎಲ್ಲ ರಾಷ್ಟ್ರಗಳು ಲಾಕ್ ಡೌನ್ ಜಾರಿಗೊಳಿಸಿವೆ. ಕೊರೊನಾ ಸೋಂಕು ತಡೆಗಟ್ಟಲು ಲಸಿಕೆ ಇನ್ನೂ ಲಭ್ಯವಾಗದ ಕಾರಣ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ.

ಇಷ್ಟಾದರೂ ಕೆಲವರು ಮಾಸ್ಕ್ ಧರಿಸದೆ ತಾವೂ ಸಂಕಷ್ಟಕ್ಕೆ ಸಿಲುಕುವುದಲ್ಲದೆ ಇತರೆಯವರಿಗೂ ಕಂಟಕಪ್ರಾಯವಾಗಿ ಪರಿಣಮಿಸುತ್ತಾರೆ. ಹೀಗಾಗಿ ಇನ್ನು ಮುಂದೆ ಮಾಸ್ಕ್ ಧರಿಸದಿದ್ದರೆ ಕೇವಲ ದಂಡ ಮಾತ್ರವಲ್ಲ, ಜೈಲು ಶಿಕ್ಷೆಯೂ ಗ್ಯಾರಂಟಿಯಾಗಲಿದೆ. ಅಂದಹಾಗೆ ಇಂತಹುದೊಂದು ಕಾನೂನು ಜಾರಿಗೆ ಬರುತ್ತಿರುವುದು ನಮ್ಮ ದೇಶದಲ್ಲಲ್ಲ.

ಕುವೈಟ್ ಮತ್ತು ಕತಾರ್ ನಲ್ಲಿ ಈ ಕಾನೂನು ಜಾರಿಗೊಳಿಸಲಾಗಿದ್ದು, ಕುವೈಟ್ ನಲ್ಲಿ ಮಾಸ್ಕ್ ಧರಿಸದವರಿಗೆ 12.25 ಲಕ್ಷ ರೂಪಾಯಿ ದಂಡ ಹಾಗೂ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಕತಾರ್ ನಲ್ಲಿ ಇದೇ ತಪ್ಪಿಗೆ 41.60 ಲಕ್ಷ ರೂಪಾಯಿ ದಂಡ ಹಾಗೂ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ತರಲು ಸಿದ್ಧತೆ ನಡೆಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...