alex Certify ಮಕ್ಕಳು ಬೆಳಗ್ಗೆ ‘ತಿಂಡಿ’ ತಿನ್ನದಿದ್ರೆ ಪರೀಕ್ಷೆಯಲ್ಲಿ ಬರುತ್ತದೆ ಕಡಿಮೆ ಅಂಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳು ಬೆಳಗ್ಗೆ ‘ತಿಂಡಿ’ ತಿನ್ನದಿದ್ರೆ ಪರೀಕ್ಷೆಯಲ್ಲಿ ಬರುತ್ತದೆ ಕಡಿಮೆ ಅಂಕ…!

ನಮ್ಮ ಮಗು ಚೆನ್ನಾಗಿ ಓದಿ ಒಳ್ಳೆಯ ಅಂಕ ಪಡೆಯಬೇಕು ಅನ್ನೋ ಆಸೆ ಹೆತ್ತವರಿಗೆ ಇರುವುದು ಸಹಜ. ನೀವು ಕೂಡ ಮಕ್ಕಳ ಓದಿನ ಬಗ್ಗೆ ಕನಸು ಕಟ್ಟಿಕೊಂಡಿದ್ರೆ ಪ್ರತಿ ದಿನ ತಪ್ಪದೇ ಅವರು ಬೆಳಗಿನ ತಿಂಡಿ ತಿನ್ನುವಂತೆ ನೋಡಿಕೊಳ್ಳಿ.

ಯಾಕಂದ್ರೆ ಬೆಳಗಿನ ತಿಂಡಿಗೂ ಅವರು ಪಡೆಯುವ ಅಂಕಗಳಿಗೂ ಸಂಬಂಧವಿದೆ. ಫ್ರಂಟಿಯರ್ಸ್ ಇನ್ ಪಬ್ಲಿಕ್ ಹೆಲ್ತ್ ಅನ್ನೋ ಪತ್ರಿಕೆಯಲ್ಲಿ ಈ ಕುರಿತ ಸಂಶೋಧನಾ ವರದಿ ಪ್ರಕಟವಾಗಿದೆ. ಪ್ರತಿ ದಿನ ಬೆಳಗ್ಗೆ ತಿಂಡಿ ತಿನ್ನದೇ ಇರುವ ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸಿರೋದು ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಯಾರು ನಿತ್ಯವೂ ತಪ್ಪದೇ ಬ್ರೇಕ್ ಫಾಸ್ಟ್ ಮಾಡ್ತಾರೋ ಆ ವಿದ್ಯಾರ್ಥಿಗಳು ಓದಿನಲ್ಲಿ ಮುಂದಿದ್ದಾರೆ.

ಬ್ರಿಟನ್ ನ ಶಾಲೆಯೊಂದರ ವಿದ್ಯಾರ್ಥಿಗಳನ್ನು ಸಂಶೋಧಕರು ಸಮೀಕ್ಷೆಗೆ ಒಳಪಡಿಸಿದ್ದಾರೆ. ಒಟ್ಟು 294 ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಬೆಳಗ್ಗೆ ತಿಂಡಿ ತಿನ್ನದೇ ಇರುವ ವಿದ್ಯಾರ್ಥಿಗಳಿಗೆ ಮೆದುಳು ಚುರುಕಾಗಿ ಕೆಲಸ ಮಾಡುವುದಿಲ್ಲ, ಪೋಷಕಾಂಶಗಳ ಕೊರತೆಯಿಂದ ಅವರು ಶಾಲೆಯಲ್ಲಿ ಉತ್ತಮ ಪ್ರದರ್ಶನ ನೀಡುವುದು ಅಸಾಧ್ಯವಾಗುತ್ತದೆ ಅಂತಾ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...