alex Certify ಬೆಚ್ಚಿಬೀಳಿಸುವಂತಿದೆ ‘ಕರೋನಾ’ ಕುರಿತ CIDRAP ವರದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ‘ಕರೋನಾ’ ಕುರಿತ CIDRAP ವರದಿ

ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕರೋನಾ ಮಹಾಮಾರಿ ದಿನದಿಂದ ದಿನಕ್ಕೆ ತನ್ನ ಆರ್ಭಟವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದರ ನಿಯಂತ್ರಣಕ್ಕಾಗಿ ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿದ್ದರೂ ಇದು ನಿಯಂತ್ರಣಕ್ಕೆ ಬರುತ್ತಿಲ್ಲ.

ಇದರ ಮಧ್ಯೆ ಸಾಂಕ್ರಾಮಿಕ ರೋಗ ಸಂಶೋಧನೆ ಮತ್ತು ನೀತಿ ಕೇಂದ್ರ (ಸಿ.ಐ.ಡಿ.ಆರ್.ಎ.ಪಿ.) ಬೆಚ್ಚಿಬೀಳಿಸುವ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. ಕರೋನಾ ನಿರ್ಮೂಲನೆಗೆ ಕನಿಷ್ಠ ಎರಡು ವರ್ಷ ಬೇಕು ಎಂದಿರುವ ಸಂಸ್ಥೆ, ವಿಶ್ವದ ಶೇಕಡಾ 70 ಮಂದಿ ಈ ವೈರಸ್ ಗೆ ತುತ್ತಾಗುವ ಆತಂಕ ವ್ಯಕ್ತಪಡಿಸಿದೆ.

ಸಿ.ಐ.ಡಿ.ಆರ್.ಎ.ಪಿ. ನಿರ್ದೇಶಕ ಮೈಕಲ್, ವೈದ್ಯಕೀಯ ನಿರ್ದೇಶಕ ಕ್ರಿಸ್ಟನ್ ಮೂರ್, ಜಾನ್ ಹಾಗೂ ಮಾರ್ಕ್ ಇವರುಗಳ ತಂಡ ಈ ಅಧ್ಯಯನವನ್ನು ನಡೆಸಿದ್ದು, ಸಣ್ಣಪುಟ್ಟ ಏರಿಳಿತದೊಂದಿಗೆ 2021 ರಲ್ಲಿ ಈಗಿನಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಸೋಂಕು ಹರಡಲಿದೆ ಎಂದು ಎಚ್ಚರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...