alex Certify ಬಿಗ್ ನ್ಯೂಸ್: ವಿಶ್ವದಾದ್ಯಂತ ಏರುತ್ತಲೇ ಇದೆ ಕರೋನಾ ಸೋಂಕಿತರ ಸಂಖ್ಯೆ – ಮಹಾಮಾರಿಗೆ ಈವರೆಗೆ 2.71 ಲಕ್ಷ ಮಂದಿ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ವಿಶ್ವದಾದ್ಯಂತ ಏರುತ್ತಲೇ ಇದೆ ಕರೋನಾ ಸೋಂಕಿತರ ಸಂಖ್ಯೆ – ಮಹಾಮಾರಿಗೆ ಈವರೆಗೆ 2.71 ಲಕ್ಷ ಮಂದಿ ಬಲಿ

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕರೋನಾ ಮಹಾಮಾರಿ ಈಗ ವಿಶ್ವದಾದ್ಯಂತ ತನ್ನ ಆರ್ಭಟ ಮುಂದುವರಿಸಿದ್ದು, ಈ ಮಾರಣಾಂತಿಕ ಸೋಂಕಿಗೆ ಈವರೆಗೆ 2.71 ಲಕ್ಷ ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 39.54 ಲಕ್ಷಕ್ಕೆ ಏರಿಕೆಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವರ ಸ್ಥಿತಿ ಗಂಭೀರವಾಗಿದೆ.

ಅಮೆರಿಕಾ ಒಂದರಲ್ಲೇ ಈ ಮಾರಣಾಂತಿಕ ಸೋಂಕಿಗೆ 77,190 ಮಂದಿ ಬಲಿಯಾಗಿದ್ದು, 12,96,879 ಮಂದಿ ಸೋಂಕಿತರಿದ್ದಾರೆ. ಸ್ಪೇನ್ ನಲ್ಲಿ 26,299 ಮಂದಿ ಬಲಿಯಾಗಿದ್ದು, 2,60,117 ಸೋಂಕಿಗೊಳಗಾಗಿದ್ದಾರೆ. ಇನ್ನು ಬೆಲ್ಜಿಯಂನಲ್ಲಿ 8,521 ಮಂದಿ ಬಲಿಯಾಗಿದ್ದು, 52,011 ಸೋಂಕು ಪೀಡಿತರಾಗಿದ್ದಾರೆ.

ಭಾರತದಲ್ಲೂ ಈ ಮಹಾಮಾರಿ ಆರ್ಭಟಿಸುತ್ತಿದ್ದು, ಶುಕ್ರವಾರ ಒಂದೇ ದಿನ 2700 ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಈವರೆಗೆ ಈ ಮಾರಣಾಂತಿಕ ಸೋಂಕಿಗೆ 1,980 ಮಂದಿ ಬಲಿಯಾಗಿದ್ದು, 59,060 ಮಂದಿ ಸೋಂಕು ಪೀಡಿತರಾಗಿದ್ದಾರೆ. ಕರ್ನಾಟಕದಲ್ಲಿ ಶುಕ್ರವಾರದಂದು ಅತಿ ಹೆಚ್ಚು ಅಂದರೆ 52 ಕರೋನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 755 ಕ್ಕೆ ಏರಿಕೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...