alex Certify ನಾನು ಬೈಡನ್ ವಿರುದ್ಧ ಗೆದ್ದಿದ್ದೇನೆ ಎಂದು ಮತ್ತೆ ಹೇಳಿದ ಟ್ರಂಪ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಬೈಡನ್ ವಿರುದ್ಧ ಗೆದ್ದಿದ್ದೇನೆ ಎಂದು ಮತ್ತೆ ಹೇಳಿದ ಟ್ರಂಪ್…!

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಹಾಗೂ ಟ್ರಂಪ್ ನಡುವೆ ನೇರ ಹಣಾಹಣಿ ಇದ್ದದ್ದು ಗೊತ್ತಿರುವ ವಿಚಾರವೇ. ಈ ಮಧ್ಯೆ ಕೊನೆಗೂ ಜೊ ಬೈಡನ್ ಗೆಲುವು ಸಾಧಿಸಿದ್ದರು. ಆದರೆ ಟ್ರಂಪ್ ಮಾತ್ರ ನಾನೇ ಗೆಲುವು ಸಾಧಿಸಿದ್ದೇನೆ ಎಂದು ಹೇಳುವ ಮೂಲಕ ತಮ್ಮ ಸೋಲನ್ನು ಒಪ್ಪಿಕೊಳ್ಳುತ್ತಲೇ ಇಲ್ಲ.

ಮತ ಎಣಿಕೆಯಲ್ಲಿ ಅಕ್ರಮ, ವಂಚನೆ ನಡೆದಿದೆ ಎನ್ನುವ ಮೂಲಕ ತಾನು ಬೈಡನ್ ವಿರುದ್ಧ ಗೆಲುವು ಸಾಧಿಸಿದ್ದೇನೆ ಎಂದು ಮತ್ತೊಮ್ಮೆ ಪುನರ್ ಉಚ್ಚಾರ ಮಾಡಿದ್ದಾರೆ ಟ್ರಂಪ್. ಈ ಕುರಿತು ಟ್ವೀಟ್ ಮಾಡಿರುವ ಅವರು, ನಾನು ಚುನಾವಣೆಯಲ್ಲಿ ಜಯ ಗಳಿಸಿದ್ದೇನೆ. ಮತ ಎಣಿಕೆಯಲ್ಲಿ ವಂಚನೆ ನಡೆದಿದೆ ಎಂದು ಟ್ವೀಟ್ ಮಾಡಿದ್ದಾರೆ ಟ್ರಂಪ್.

ಇದರ ಜೊತೆಗೆ ತಮ್ಮ ಗೆಲುವಿನ ಕುರಿತು ಪ್ರಕಟವಾಗಿದ್ದ ಒಂದಿಷ್ಟು ವರದಿಗಳ ಕಟಿಂಗಳನ್ನೂ ಪೋಸ್ಟ್ ಮಾಡಿದ್ದಾರೆ. ಜೊತೆಗೆ ತಾವು ಮಾಡಿದ ಕೆಲಸಗಳ ಬಗ್ಗೆಯೂ ಸರಣಿ ಟ್ವೀಟ್ ಮಾಡಿದ್ದಾರೆ. ಒಟ್ನಲ್ಲಿ ತಮ್ಮ ಸೋಲನ್ನು ಇನ್ನೂ ಒಪ್ಪಿಕೊಳ್ಳಲಾಗದೇ ಪದೇ ಪದೇ ನಾನು ಗೆದ್ದಿದ್ದೇನೆ ಎಂದು ಹೇಳುತ್ತಿದ್ದಾರೆ ಅಮೆರಿಕಾ ನಿರ್ಗಮಿತ ಅಧ್ಯಕ್ಷ ಟ್ರಂಪ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...