
ಸಾಮಾಜಿಕ ಜಾಲತಾಣಗಳಲ್ಲೂ ಈತನ ಫೋಟೋಸ್ ವೈರಲ್ ಆಗಿತ್ತು.
ವೈರಲ್ ಆದ ಫೋಟೋಗಳಲ್ಲಿ ಶರ್ಟ್ ಧರಿಸದ ವ್ಯಕ್ತಿ ತಲೆಗೆ ಕೊಂಬುಗಳನ್ನ ಹೊಂದಿರುವ ಟೋಪಿಗಳನ್ನ ಧರಿಸಿರೋದು ಹಾಗೂ ಮುಖಕ್ಕೆ ನೀಲಿ, ಬಿಳಿ ಹಾಗೂ ಕೆಂಪು ಬಣ್ಣಗಳನ್ನ ಬಳಿದುಕೊಂಡಿದ್ದು ಕಂಡು ಬಂದಿತ್ತು. ಈ ವ್ಯಕ್ತಿಯನ್ನ ಅಮೆರಿಕ ಮಾಧ್ಯಮಗಳು ಜೆಕ್ ಎಂಜೆಲಿ ಎಂದು ಗುರುತಿಸಿವೆ. ವರದಿಗಳ ಪ್ರಕಾರ ಏಂಜೆಲಿ ಕಳೆದೊಂದು ವರ್ಷಗಳಿಂದ ಬಲಪಂಥೀಯರ ರ್ಯಾಲಿಗಳಲ್ಲಿ ಕಾಣಿಸಿಕೊಳ್ತಿದ್ದಾನೆ ಎನ್ನಲಾಗಿದೆ.
ಅಮೆರಿಕ ಕ್ಯಾಪಿಟಲ್ನಲ್ಲಿ ಹಿಂಸಾತ್ಮಕ ಪ್ರವೇಶ ಹಾಗೂ ಅಸಂವಿಧಾನಿಕ ನಡವಳಿಕೆ ಹಲವಾರು ಆರೋಪಗಳಡಿಯಲ್ಲಿ ಜೆಕ್ ಎಂಜೆಲಿ ಅಲಿಯಾಸ್ ಜಾಕೊಬ್ ಚಾನ್ಸ್ಲೆ ಸದ್ಯ ಜೈಲಿನಲ್ಲಿದ್ದಾನೆ. ಈ ಬಗ್ಗೆ ಈತನ ತಾಯಿ ಪ್ರತಿಕ್ರಿಯೆ ನೀಡಿದ್ದು , ನನ್ನ ಮಗ ಶುಕ್ರವಾರದಿಂದ ಏನನ್ನೂ ತಿಂದಿಲ್ಲ. ಆತನಿಗೆ ತಿನ್ನಲು ಆರ್ಗಾನಿಕ್ ಆಹಾರ ಬೇಕು. ಸಾವಯವ ಆಹಾರ ಸೇವಿಸದಿದ್ದಲ್ಲಿ ನನ್ನ ಮಗ ಅನಾರೋಗ್ಯಕ್ಕೀಡಾಗುತ್ತಾನೆ ಎಂದು ಹೇಳಿದ್ದಾಳೆ.
ಈ ವಿಚಾರವನ್ನ ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದ್ದು ಟ್ವೀಟಿಗರು ಈತನಿಗೆ ಜೈಲಿನಲ್ಲೂ ಮೆನು ಪ್ರಕಾರವೇ ತಿನ್ನೋಕೆ ಬೇಕಾ ಎಂದು ಪ್ರಶ್ನೆ ಮಾಡ್ತಿದ್ದಾರೆ.