alex Certify ಕೊರೊನಾ ಮಧ್ಯೆ ಮನೆಯೊಂದರಲ್ಲಿ 1000 ಮಂದಿಯಿಂದ ಪಾರ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮಧ್ಯೆ ಮನೆಯೊಂದರಲ್ಲಿ 1000 ಮಂದಿಯಿಂದ ಪಾರ್ಟಿ

1,000 People Attend Chicago House Party During Coronavirus Pandemic

ಕೊರೊನಾ ವೈರಸ್ ಗೆ ಇಡೀ ವಿಶ್ವವೇ ದಂಗಾಗಿದೆ. ಅಮೆರಿಕಾದಲ್ಲಿ ಕೊರೊನಾ ಸೋಂಕಿಗೆ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. 938,154 ಮಂದಿ ಸೋಂಕಿಗೆ ತುತ್ತಾಗಿದ್ದರೆ 53 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಆದ್ರೆ ದೇಶದಲ್ಲಿ ಲಾಕ್ ಡೌನ್ ಜಾರಿ ಮಾಡಲು ವಿರೋಧವಿದೆ. ಜನರು ಮನೆ ತೊರೆದು ಬೀಚ್ ಗಳಿಗೆ ಹೋಗ್ತಿದ್ದಾರೆ. ಪಾರ್ಟಿಯೊಂದರಲ್ಲಿ ಒಂದು ಸಾವಿರ ಮಂದಿ ಪಾಲ್ಗೊಂಡಿದ್ದರಂತೆ.

ಅಮೆರಿಕದ ಚಿಕಾಗೊದಲ್ಲಿ ನಡೆದ ಪಾರ್ಟಿಯಲ್ಲಿ, ಯುವಕ-ಯುವತಿಯರು ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಜನರು ಪಾರ್ಟಿಯಲ್ಲಿ ಕುಡಿದು ನೃತ್ಯ ಮಾಡ್ತಿದ್ದರು. ಅಪಾರ್ಟ್ಮೆಂಟ್ ಒಂದರಲ್ಲಿ ಜನರು ಪಾರ್ಟಿ ಮಾಡಿದ್ದಾರೆ. ಶನಿವಾರ ನಡೆದ ಈ ಪಾರ್ಟಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ನೇರ ಪ್ರಸಾರ ಮಾಡಲಾಗಿದೆ.

ಇದನ್ನು ನೋಡಿದ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವೇ ಕೆಲವು ಮಂದಿ ಮಾಸ್ಕ್ ಧರಿಸಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ದೇಶದ ಪರಿಸ್ಥಿತಿ ಚಿಂತಾಜನಕವಾಗಿದ್ದರೂ ಪಾರ್ಟಿ ಮಾಡ್ತಿರುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...