alex Certify ಕೊರೊನಾದಿಂದ ಆರ್ಥಿಕ ಸಂಕಷ್ಟದಲ್ಲಿದ್ದಾಕೆ ಜೀವನೋಪಾಯಕ್ಕೆ ಮಾಡಿದ್ದೇನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಆರ್ಥಿಕ ಸಂಕಷ್ಟದಲ್ಲಿದ್ದಾಕೆ ಜೀವನೋಪಾಯಕ್ಕೆ ಮಾಡಿದ್ದೇನು ಗೊತ್ತಾ..?

ಕೊರೊನಾ ಮಹಾಮಾರಿ ವಿಶ್ವಕ್ಕೆ ಬಂದಪ್ಪಳಿಸಿದ ಬಳಿಕ ಸಾಕಷ್ಟು ಮಂದಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಇನ್​ ಕೆಲವರು ಬ್ಯುಸಿನೆಸ್​​ನಲ್ಲಿ ಲಾಸ್​ ಅನುಭವಿಸಿದ್ದಾರೆ. ಇದೇ ರೀತಿ ಬ್ರೆಜಿಲ್ ​​ನಲ್ಲೂ ಕೊರೊನಾ ಬಳಿಕ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಮಹಿಳೆ ಜೀವನೋಪಾಯಕ್ಕೆ ಹೊಸ ಮಾರ್ಗ ಹುಡುಕಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ವಾಲ್ಸಿನಿಯಾ ಮಚಾದೊ ಎಂಬ 51 ವರ್ಷದ ಮಹಿಳೆ ಮೂಲತಃ ಸಣ್ಣ ಉದ್ಯಮಿ. ಆದ್ರೆ ಕೋವಿಡ್​ ಬಳಿಕ ಉದ್ಯಮ ಸಂಪೂರ್ಣ ನೆಲಕಚ್ಚಿ ಹೋಗಿತ್ತು. ಕೈಲಿದ್ದ ಹಣವೆಲ್ಲ ಖಾಲಿಯಾಗ್ತಿದ್ದಂತೆ ಧೃತಿಗೆಡದ ಈ ಮಹಿಳೆ ತನ್ನ ಕಾರನ್ನೇ ಫ್ಲವರ್ ಶಾಪ್​ ಆಗಿ ಮಾರ್ಪಾಡು ಮಾಡಿದ್ದಾರೆ.

ರಸ್ತೆ ಬದಿಯಲ್ಲಿ ತನ್ನ ಕಾರಿನ ಶಾಪ್​ ಇಟ್ಟಿರೋ ಈಕೆ ಇದಲ್ಲಿ ಸನ್​ ಫ್ಲವರ್​, ಆರ್ಚಿಡ್, ಗುಲಾಬಿ​ ಸೇರಿದಂತೆ ಸಾಕಷ್ಟು ಹೂವನ್ನ ಮಾರಾಟ ಮಾಡ್ತಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರೋ ಮಚಾದೋ, ನನ್ನ ಬಳಿ ಮನೆಯ ಬಾಡಿಗೆ ಕಟ್ಟೋಕೂ ಹಣವಿರಲಿಲ್ಲ. ಹೀಗಾಗಿ ಕಾರನ್ನ ಫ್ಲವರ್​ ಶಾಪ್​ ಆಗಿ ಮಾರ್ಪಾಡೋ ಮಾಡೋ ನಿರ್ಧಾರಕ್ಕೆ ಬಂದೆ. ಇದೀಗ ನನ್ನ ಈ ಹೊಸ ಉದ್ಯಮ ಬಹಳ ಚೆನ್ನಾಗಿ ನಡೀತಿದೆ ಅಂತಾ ಸಂತಸ ಹೊರಹಾಕ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...