alex Certify ಅಮೆರಿಕಾ ಜನತೆಗೆ ಮತ್ತೊಂದು ಶಾಕ್: ನೀರಿನಲ್ಲಿ ಕಂಡು ಬಂದಿದೆ ಮೆದುಳು ಭಕ್ಷಕ ಅಮೀಬಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾ ಜನತೆಗೆ ಮತ್ತೊಂದು ಶಾಕ್: ನೀರಿನಲ್ಲಿ ಕಂಡು ಬಂದಿದೆ ಮೆದುಳು ಭಕ್ಷಕ ಅಮೀಬಾ..!

ಯುಎಸ್ ರಾಜ್ಯ ಟೆಕ್ಸಾಸ್ ಆಗ್ನೇಯ ಭಾಗದಲ್ಲಿ ಸರಬರಾಜಾಗ್ತಿದ್ದ  ನೀರಿನಲ್ಲಿ ಮೆದುಳು ತಿನ್ನುವ ಅಮೀಬಾ ಕಂಡುಬಂದಿದೆ. ಇದಾದ ನಂತ್ರ  ಎಂಟು ನಗರಗಳ ನಿವಾಸಿಗಳನ್ನು ಎಚ್ಚರಿಸಲಾಗಿದೆ. ಈ ಅಮೀಬಾ ಮೆದುಳು ಭಕ್ಷಕ. ಟೆಕ್ಸಾಸ್ ಆಡಳಿತವು ಎಲ್ಲರೂ ಜಾಗರೂಕರಾಗಿರಬೇಕು ಇಲ್ಲದಿದ್ದರೆ ಅದು ವಿನಾಶವನ್ನು ತರಬಹುದು ಎಂದು ಎಚ್ಚರಿಸಿದೆ.

ಟೆಕ್ಸಾಸ್ ಆಯೋಗವು ಪರಿಸರ ಗುಣಮಟ್ಟದ ಆಧಾರದ ಮೇಲೆ ಈ ಸಲಹೆಯನ್ನು ನೀಡಿದೆ. ನೀರು ಸರಬರಾಜಿನಲ್ಲಿ ಮೆದುಳು ತಿನ್ನುವ ಅಮೀಬಾ ಇದ್ದು, ಆದ್ದರಿಂದ ತಕ್ಷಣ ಬಳಕೆ ನಿಲ್ಲಿಸಿ ಎಂದು ಹೇಳಲಾಗಿದೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸುವುದಾಗಿ ಆಡಳಿತ ಹೇಳಿದೆ.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, ಮೆದುಳು ತಿನ್ನುವ ಅಮೀಬಾ ಸಾಮಾನ್ಯವಾಗಿ ಮಣ್ಣು, ಬಿಸಿನೀರಿನ ತೊಟ್ಟಿಗಳು, ನದಿಗಳು ಮತ್ತು ಬಿಸಿನೀರಿನ ಬುಗ್ಗೆಗಳಲ್ಲಿ ಕಂಡುಬರುತ್ತದೆ. ಸ್ವಚ್ಛತೆಯ ಕೊರತೆಯಿರುವ ಈಜುಕೊಳಗಳಲ್ಲಿಯೂ ಈ ಅಮೀಬಾವನ್ನು ಕಾಣಬಹುದು. ಅಮೀಬಾ ಕೈಗಾರಿಕಾ ಘಟಕದಿಂದ ಹೊರಬರುವ ಬಿಸಿನೀರಿನಲ್ಲಿಯೂ  ಕಂಡುಬರುತ್ತವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...