alex Certify International Day of Happiness: ಹಣ ನಮಗೆ ಸಂತೋಷ ನೀಡುತ್ತದೆಯೇ…? ಇಲ್ಲಿದೆ ಪರಿಣಿತರ ಅಭಿಪ್ರಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

International Day of Happiness: ಹಣ ನಮಗೆ ಸಂತೋಷ ನೀಡುತ್ತದೆಯೇ…? ಇಲ್ಲಿದೆ ಪರಿಣಿತರ ಅಭಿಪ್ರಾಯ

ಮಾರ್ಚ್‌ 20 ರ ಭಾನುವಾರದಂದು ಅಂತರಾಷ್ಟ್ರೀಯ ಸಂತಸದ ದಿನವನ್ನಾಗಿ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಸಂತಸದ ಕುರಿತು ಹಲವು ವ್ಯಾಖ್ಯಾನಗಳು ಕೇಳಿ ಬಂದಿವೆ. ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ ಎಂಬ ಮಾತನ್ನು ಈಗ ಮರು ವ್ಯಾಖ್ಯಾನಿಸಲಾಗಿದೆ. ಜನರು ಬಯಸುವ ಸಂತಸದಲ್ಲಿ ಹಣ ಕೂಡ ಈಗ ಪಾಲುದಾರನಾಗ್ತಿದೆ. ಜನರ ಆಸೆ ಆಕಾಂಕ್ಷೆಗಳನ್ನು ನೆರವೇರಿಸುವಲ್ಲಿ ಹಣವು ಧನಾತ್ಮಕ ಬೆಂಬಲವಾಗಿರಬಹುದು. ಅದಕ್ಕೆ ಸರಿಯಾದ ಮಾರ್ಗ ತಿಳಿದಿರಬೇಕಷ್ಟೆ. ಜನರ ವರ್ತನೆಗಳು ಬದಲಾಗಿವೆ.

ತಾತ್ಕಾಲಿಕ ಸಂತೋಷವನ್ನು ಖರೀದಿಸುವುದಕ್ಕಿಂತ ಅರ್ಥಪೂರ್ಣ ಅನುಭವಗಳಿಗೆ ಹಣಕಾಸು ಒದಗಿಸುವುದೇ ಮಿಗಿಲು ಅನ್ನೋದು ಅರ್ಥವಾಗಿದೆ. ಕೋವಿಡ್‌ ನಿಂದಾದ ಪೆಂಡಮಿಕ್‌ ಜನರ ಕಣ್ಣು ತೆರೆಸಿದೆ ಅಂತಾ ಬ್ಯುಸಿನೆಸ್‌ & ಲೈಫ್‌ ಕೋಚ್‌ ನ ಸಂಸ್ಥಾಪಕ ಗೌರವ್ ಭಗತ್ ಅಭಿಪ್ರಾಯಪಟ್ಟಿದ್ದಾರೆ.

“ಕಳೆದ ಎರಡು ವರ್ಷಗಳಲ್ಲಿ ಲಕ್ಷಾಂತರ ಜನರು ತಮ್ಮ ಉದ್ಯೋಗ ತೊರೆದಿದ್ದಾರೆ, ಅದನ್ನು ನಾವು ‘ದಿ ಗ್ರೇಟ್ ರೆಸಿಗ್ನೇಷನ್’ ಎಂದೇ ಕರೆದಿದ್ದೇವೆ.  ಜನರು ಜೀವನದ ತಾತ್ಕಾಲಿಕ ಸಂತೋಷಗಳಲ್ಲಿ ಆಸಕ್ತಿ ಹೊಂದಿಲ್ಲ. ಬದಲಿಗೆ ಖಾಯಂ ಖುಷಿಯನ್ನು ಸ್ವಂತಕ್ಕೆ ಪಡೆಯುವಲ್ಲಿ ನಿರತರಾಗಿದ್ದಾರೆಂದು ಗೌರವ್‌ ಅಭಿಪ್ರಾಯಪಟ್ಟಿದ್ದಾರೆ.

ಸಾವಿರಾರು ಭಾರತೀಯ ಯುವಕರು ತಮ್ಮ ಮನೆಗಳಿಂದಲೇ ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಾರ ಶುರುಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಲಭ್ಯವಿರುವ ಹಣಕಾಸಿನ ಭದ್ರತೆಗೆ ಧನ್ಯವಾದಗಳು. ಆಸ್ತಿಗಿಂತ ಅನುಭವಗಳಿಗೆ ಪ್ರಾಮುಖ್ಯತೆ ನೀಡುವುದರೊಂದಿಗೆ ‘ಕೆಲಸ-ಜೀವನ ಸಮತೋಲನ’ ಎಂಬುದನ್ನು ಅಳವಡಿಸಿಕೊಂಡಿರುವುದು ಸ್ವಾಗತಾರ್ಹ ಎಂದಿದ್ದಾರೆ.

ಕ್ಲಿನಿಕಲ್ ಹಿಪ್ನೋಥೆರಪಿಸ್ಟ್ ಮತ್ತು ಮೆಟಾಫಿಸಿಕಲ್ ಸ್ಪೀಕರ್, ಬರ್ಖಾ ಪ್ರಭಾಕರ್ ಕೂಡ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದಾರೆ. “2020ಕ್ಕಿಂತ ಮೊದಲು  ನಾವು ಬಹು ಖರೀದಿ ಆಯ್ಕೆಗಳನ್ನು ಹೊಂದಿದ್ದೆವು, ಮಿತಿಮೀರಿದ ಜೀವನಶೈಲಿ ಅಳವಡಿಸಿಕೊಂಡಿದ್ದೆವು. ಆದ್ರೆ ಲಾಕ್‌ಡೌನ್‌ನ ಆರಂಭಿಕ ಹಂತಗಳು ನಮ್ಮ ಆರ್ಥಿಕ ವೆಚ್ಚಗಳನ್ನು ಬದುಕಲು ಅಗತ್ಯವಾದ ಅಗತ್ಯಗಳ ಮೇಲೆ ಕೇಂದ್ರೀಕರಿಸಲು ಒತ್ತಾಯಿಸಿತು. ನಮ್ಮ ಆದ್ಯತೆಗಳನ್ನು ಗುರುತಿಸುವಲ್ಲಿ ಕೂಲಂಕುಷವಾದ ಪರೀಕ್ಷೆ ಇದು” ಎಂದು ಅಭಿಪ್ರಾಯಪಟ್ಟಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...