alex Certify ಮದುವೆ ಮನೆಗೆ ಲಗ್ಗೇಜ್​ ಟ್ರಾಲಿಯಲ್ಲಿ ಎಂಟ್ರಿ ಕೊಟ್ಟ ವಧು: ಕುತೂಹಲದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮನೆಗೆ ಲಗ್ಗೇಜ್​ ಟ್ರಾಲಿಯಲ್ಲಿ ಎಂಟ್ರಿ ಕೊಟ್ಟ ವಧು: ಕುತೂಹಲದ ವಿಡಿಯೋ ವೈರಲ್

ಮದುವೆ ಮನೆಗೆ ವಧು-ವರರು ಡಿಫರೆಂಟ್​ ರೀತಿಯಲ್ಲಿ ಎಂಟ್ರಿ ಕೊಡುವ ಹಲವು ವಿಡಿಯೋಗಳು ವೈರಲ್​ ಆಗುತ್ತಿವೆ. ಅಂಥದ್ದೇ ಒಂದು ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ವಧು ಲಗ್ಗೇಜ್​ ಟ್ರಾಲಿಯಲ್ಲಿ ತನ್ನ ಮದುವೆಯ ಸ್ಥಳಕ್ಕೆ ತಲುಪಿದ್ದಾಳೆ !

ಪ್ರಿಯಾಂಕಾ ಇಂಡೋರಿಯಾ ಎಂಬ ವಧುವಿನ ಸಹೋದರರು ಆಕೆ ಆ ಹೈ ಹೀಲ್ಸ್ ಮತ್ತು ಭಾರವಾದ ಲೆಹೆಂಗಾದಲ್ಲಿ ನಡೆಯಲು ಬಯಸಲಿಲ್ಲ. ಆದ್ದರಿಂದ, ಅವರು ಟ್ರಾಲಿಯಲ್ಲಿ ಆಕೆಯನ್ನು ಕರೆತಂದಿದ್ದು, ಅದರ ವಿಡಿಯೋ ಶೇರ್​ ಮಾಡಿದ್ದಾರೆ. ವಿಡಿಯೋವನ್ನು ಇದಾಗಲೇ 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಈಗ ವೈರಲ್ ಆಗಿರುವ ವಿಡಿಯೋದಲ್ಲಿ ವಧು ಮದುಮಗಳ ದಿರಿಸಿನಲ್ಲಿ ಲಗೇಜ್ ಟ್ರಾಲಿಯಲ್ಲಿ ನಿಂತಿರುವುದನ್ನು ಕಾಣಬಹುದು. ಆಕೆಯ ಸಹೋದರರು ಟ್ರಾಲಿಯನ್ನು ಮದುವೆ ಸ್ಥಳಕ್ಕೆ ತಳ್ಳಿಕೊಂಡು ಬಂದಿದ್ದಾರೆ. ಇದನ್ನು ಪ್ರಿಯಾಂಕಾ ಶೇರ್​ ಮಾಡಿಕೊಂಡಿದ್ದು, ಕಾರಣವನ್ನೂ ಹೇಳಿದ್ದಾರೆ.

“ನನ್ನ ಸಹೋದರರು ಆ ಹೈ ಹೀಲ್ಸ್​ನಲ್ಲಿ ನನ್ನನ್ನು ಆಯಾಸಗೊಳಿಸಲು ಬಯಸಲಿಲ್ಲ. ಅದ್ದರಿಂದ ಟ್ರಾಲಿಯಲ್ಲಿ ಕರೆದುಕೊಂಡು ಬಂದರು ಎಂದಿದ್ದಾಳೆ”. ತಂಗಿಯ ಮೇಲೆ ಅಣ್ಣದ ಪ್ರೀತಿಗೆ ನೆಟ್ಟಿಗರು ಮನಸೋತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...