alex Certify ಆರೋಗ್ಯ ಕಾಪಾಡಿಕೊಂಡವರಿಗೆ ʼಬಂಪರ್‌ ಗಿಫ್ಟ್‌ʼ ನೀಡ್ತಿದೆ ಈ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯ ಕಾಪಾಡಿಕೊಂಡವರಿಗೆ ʼಬಂಪರ್‌ ಗಿಫ್ಟ್‌ʼ ನೀಡ್ತಿದೆ ಈ ಕಂಪನಿ

ಕೋವಿಡ್​ 19ನಿಂದಾಗಿ ಜನರ ಕಚೇರಿ ಕೆಲಸದ ಶೈಲಿಯೇ ಬದಲಾಗಿ ಹೋಗಿದೆ. ಸೋಂಕು ಹರಡುವ ಭೀತಿಯಿಂದ ಅನೇಕ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್​ ಕೆಲಸವನ್ನು ನೀಡಿವೆ.‌

ಮನೆಯ ನಾಲ್ಕು ಗೋಡೆಯ ನಡುವೆ ಕುಳಿತು ಕೆಲಸ ಮಾಡೋದ್ರಿಂದ ಅನೇಕರು ದೈಹಿಕ ಹಾಗೂ ಮಾನಸಿಕವಾಗಿ ಒತ್ತಡವನ್ನು ಅನುಭವಿಸುತ್ತಿದ್ದಾರೆ.

ಅನೇಕ ಕಂಪನಿಗಳು ಸಿಬ್ಬಂದಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಎಲ್ಲಾ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುತ್ತಲೇ ಬರ್ತಿದೆ. ಆದರೆ ಝೇರೋಧಾ ಎಂಬ ಹೆಸರಿನ ಕಂಪನಿ ಮಾತ್ರ ಹೊಸ ಪ್ರಯೋಗದ ಮೂಲಕ ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ.

ಉದ್ಯೋಗಿಗಳಿಗೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸುವ ಸಲುವಾಗಿ ಹೊಸ ಆಫರ್​ ಒಂದನ್ನು ಸಿಬ್ಬಂದಿಗೆ ನೀಡಲಾಗಿದೆ. ಕಂಪನಿ ಸಿಇಓ ನಿತಿನ್​ ಕಾಮತ್​ ಟ್ವಿಟರ್​ನಲ್ಲಿ ಸಿಬ್ಬಂದಿಯನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುವ ಪ್ಲಾನ್​ ಬಗ್ಗೆ ವಿವರಣೆ ನೀಡಿದ್ದಾರೆ.

ಕಾಮತ್​ ತಮ್ಮ ಸಿಬ್ಬಂದಿಗೆ 12 ತಿಂಗಳ ‘ ಗೆಟ್​ ಹೆಲ್ದಿ ಗೋಲ್​’ ಎಂಬ ಸವಾಲನ್ನು ಇಟ್ಟಿದ್ದಾರೆ. ಇದರಲ್ಲಿ ಉದ್ಯೋಗಿಗಳು ಪ್ರತಿ ತಿಂಗಳು ತಮ್ಮ ದೇಹದಲ್ಲಾದ ಸುಧಾರಣೆ ಬಗ್ಗೆ ವಿವರಣೆ ನೀಡಬೇಕು. 1 ವರ್ಷದಲ್ಲಿ ಯಾರು ಉತ್ತಮ ಆರೋಗ್ಯ ಕಾಪಾಡಿಕೊಂಡು ತಮ್ಮ ಗುರಿಯನ್ನು ತಲುಪುತ್ತಾರೋ ಆ ಸಿಬ್ಬಂದಿಯು 1 ತಿಂಗಳ ಹೆಚ್ಚುವರಿ ಸಂಬಳ ಹಾಗೂ ಒಬ್ಬರು 10 ಲಕ್ಷ ರೂಪಾಯಿ ಬಹುಮಾನ ಗೆಲ್ಲುವ ಅವಕಾಶ ಪಡೆಯಲಿದ್ದಾರೆ.

ಈ ಟ್ವೀಟ್​ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕಮೆಂಟ್​ ಸೆಕ್ಷನ್​ನಲ್ಲಿ ನೆಟ್ಟಿಗರು ಇದು ನಿಜಕ್ಕೂ ಒಳ್ಳೆ ಐಡಿಯಾ. ಲಾಕ್​ಡೌನ್ ನಮಗೆ ಸಂಪತ್ತಿಗಿಂತ ಆರೋಗ್ಯ ಮುಖ್ಯ ಎಂಬುದನ್ನ ಕಲಿಸಿದೆ ಎಂದು ಹೇಳ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...