alex Certify 25 ಸಾವಿರ ಸಂಬಳ ಇರುವವರೂ ಆಗಬಹುದು ಕೋಟ್ಯಾಧಿಪತಿ: ಇಲ್ಲಿದೆ ಹಣ ಉಳಿತಾಯದ ಟಿಪ್ಸ್‌…….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

25 ಸಾವಿರ ಸಂಬಳ ಇರುವವರೂ ಆಗಬಹುದು ಕೋಟ್ಯಾಧಿಪತಿ: ಇಲ್ಲಿದೆ ಹಣ ಉಳಿತಾಯದ ಟಿಪ್ಸ್‌…….!

ಮಿಲಿಯನೇರ್ ಆಗಲು ಲಾಟರಿ ಹೊಡೆಯಬೇಕು ಅಥವಾ ದೊಡ್ಡ ಬಂಡವಾಳ ಹಾಕಬೇಕು ಎಂಬ ಆಲೋಚನೆ ಬಹುತೇಕ ಎಲ್ಲರ  ಮನಸ್ಸಿನಲ್ಲಿದೆ. ಸಾಮಾನ್ಯವಾಗಿ ಹೆಚ್ಚು ಗಳಿಸಿದಾಗ ಮತ್ತು ಹೆಚ್ಚು ಉಳಿಸಿದಾಗ ಮಾತ್ರ ಮಿಲಿಯನೇರ್ ಆಗಬಹುದು. ಆದರೆ ಹೂಡಿಕೆಗೆ ಸರಿಯಾದ ವಿಧಾನವನ್ನು ಅಳವಡಿಸಿಕೊಂಡರೆ 20 ರಿಂದ 25 ಸಾವಿರ  ರೂಪಾಯಿ ಸಂಬಳ ಇರುವವರೂ ಮಿಲಿಯನೇರ್ ಆಗಬಹುದು. ದೀರ್ಘಾವಧಿಯ ಹೂಡಿಕೆ ಜೊತೆಗೆ ಶಿಸ್ತನ್ನು ಕಾಪಾಡಿಕೊಂಡಾಗ ಮಾತ್ರ ಇದು ಸಾಧ್ಯ.

ಮಿಲಿಯನೇರ್ ಆಗಲು ಎಲ್ಲಿ ಹೂಡಿಕೆ ಮಾಡಬೇಕು?

ಸಣ್ಣ ಉಳಿತಾಯದೊಂದಿಗೆ ದೀರ್ಘಾವಧಿಯ ಹೂಡಿಕೆ ಮಾಡಿದರೆ  ಮಿಲಿಯನೇರ್ ಆಗುವ ಕನಸನ್ನು ನನಸಾಗಿಸಬಹುದು. ಅಂತಹ ಒಂದು ನಿಧಿಯೆಂದರೆ SIP, ವ್ಯವಸ್ಥಿತ ಹೂಡಿಕೆ ಯೋಜನೆ. ಇದರಲ್ಲಿ  ದೀರ್ಘಕಾಲದವರೆಗೆ ನಿಗದಿತ ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ.

ಕೋಟ್ಯಾಧಿಪತಿಯಾಗಲು ಎಷ್ಟು ಹೂಡಿಕೆ ಮಾಡಬೇಕು?

ನಿಮ್ಮ ಸಂಬಳ 25,000 ರೂಪಾಯಿ ಇದ್ದರೆ ಹೂಡಿಕೆ ಮಾಡುವ ಮೊದಲು ಅಗತ್ಯಗಳನ್ನು ನೋಡಿಕೊಳ್ಳಬೇಕು. ಸಂಬಳದ ಶೇ.15-20 ರಷ್ಟು ಮೊತ್ತವನ್ನು ಹೂಡಿಕೆ ಮಾಡಬೇಕು. 25 ಸಾವಿರ ಸಂಬಳ ಇರುವವರು ಕೇವಲ 4000 ರಿಂದ 5000 ರೂಪಾಯಿ ಹೂಡಿಕೆ ಮಾಡಬೇಕು. SIP ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಲಾಭ ಪಡೆಯಬಹುದು. ಮಾರುಕಟ್ಟೆಗೆ ಲಿಂಕ್ ಆಗಿರುವುದರಿಂದ ಅದರಲ್ಲಿ ಸ್ವಲ್ಪ ಅಪಾಯವಿರುತ್ತದೆ. ಖಾತರಿ ಇಲ್ಲದಿದ್ದರೂ SIP ಆದಾಯವು ಸರಾಸರಿ 12 ಪ್ರತಿಶತದಷ್ಟಿದೆ.

ಯಾವಾಗ 1 ಕೋಟಿ ಆಗುತ್ತದೆ?

SIPಯಲ್ಲಿ 4000 ರೂಪಾಯಿ ಹೂಡಿಕೆ ಮಾಡಿದರೆ 12 ಪ್ರತಿಶತ ರಿಟರ್ನ್ ದರದಲ್ಲಿ 28 ವರ್ಷಗಳಲ್ಲಿ (339 ತಿಂಗಳುಗಳು) 1 ಕೋಟಿ ರೂಪಾಯಿಗಳ ನಿಧಿ ನಿಮ್ಮದಾಗುತ್ತದೆ. SIPಯಲ್ಲಿ 5000 ರೂಪಾಯಿ ಹೂಡಿಕೆ ಮಾಡಿದರೆ 1 ಕೋಟಿ ರೂಪಾಯಿ ಪಡೆಯಲು 26 ವರ್ಷಗಳು ಬೇಕು. ಸಂಬಳದ ಶೇಕಡಾ 30 ರಷ್ಟು ಅಂದರೆ ಸುಮಾರು 7000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ 23 ವರ್ಷಗಳಲ್ಲಿ ಕೋಟ್ಯಾಧಿಪತಿಯಾಗಬಹುದು. 10,000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ 20 ವರ್ಷಗಳಲ್ಲಿ 1 ಕೋಟಿ ರೂಪಾಯಿ ನಿಮ್ಮದಾಗುತ್ತದೆ.

ಸ್ಟೆಪ್-ಅಪ್ SIP ಪ್ರಯೋಜನಗಳು

ಈ ಸಮಯವು ದೀರ್ಘವೆಂದು ಎನಿಸಿದರೆ ಅದನ್ನು ಕಡಿಮೆ ಮಾಡಲು ಒಂದು ಸೂತ್ರವಿದೆ. ಈ ಸೂತ್ರದ ಮೂಲಕ 1 ಕೋಟಿಯ ಗುರಿಯನ್ನು ಸ್ವಲ್ಪ ವೇಗವಾಗಿ ಸಾಧಿಸಬಹುದು. ಇದಕ್ಕಾಗಿ ಪ್ರತಿ ವರ್ಷ ನಿಮ್ಮ SIP ಹೂಡಿಕೆಯನ್ನು ಸ್ವಲ್ಪ ಹೆಚ್ಚಿಸಬೇಕು. ಇದನ್ನು ಸ್ಟೆಪ್-ಅಪ್ SIP ಎಂದು ಕರೆಯಲಾಗುತ್ತದೆ. ಮ್ಯೂಚುವಲ್ ಫಂಡ್‌ಗಳಲ್ಲಿ ಮಾರುಕಟ್ಟೆ ಅಪಾಯವು ಅಂತರ್ಗತವಾಗಿರುತ್ತದೆ. ಹಾಗಾಗಿ ಹಣಕಾಸು ತಜ್ಞರ ಸಲಹೆಯೊಂದಿಗೆ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮುಖ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...