alex Certify ಸಾಂಬಾರಿನ ಮೇಲಿರುವ ಎಣ್ಣೆ ತೆಗೆಯಲು ಇಲ್ಲಿದೆ ‘ಸಿಂಪಲ್’ ಟ್ರಿಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಂಬಾರಿನ ಮೇಲಿರುವ ಎಣ್ಣೆ ತೆಗೆಯಲು ಇಲ್ಲಿದೆ ‘ಸಿಂಪಲ್’ ಟ್ರಿಕ್ಸ್

ಏಷ್ಯಾದಲ್ಲಿ ಏನೇ ಪದಾರ್ಥ ಮಾಡಿದರೂ ಕರ್ರಿ ಮಾತ್ರ ಸ್ಥಾನ ಪಡೆದೇ ಇರುತ್ತದೆ. ಅದರಲ್ಲೂ ಆಗ್ನೇಯ ಏಷ್ಯಾದಲ್ಲಿರುವ ದೇಶಗಳಲ್ಲಿ ಅನೇಕ ವಿಧಧ ಕರ್ರಿ ಪದಾರ್ಥವನ್ನು ಕಾಣಬಹುದಾಗಿದೆ.

ಆದರೆ ಫಿಟ್​ನೆಟ್​​ ಪ್ರಿಯರು ಈ ಕರ್ರಿ ತಿನ್ನಲು ಕೊಂಚ ಹಿಂದೇಟು ಹಾಕುತ್ತಾರೆ. ಏಕೆಂದರೆ ಕರ್ರಿ ಮೇಲೆ ತೇಲುವ ಎಣ್ಣೆಯನ್ನು ನೋಡಿದರೆ ತಿನ್ನಲು ಭಯವಾಗುತ್ತದೆ. ಬಾಯಿಗೆ ರುಚಿಕರ ಆಗಿದ್ದರೂ ಸಹ ಆರೋಗ್ಯದ ದೃಷ್ಟಿಯಿಂದ ಈ ಎಣ್ಣೆ ಭಯ ಹುಟ್ಟಿಸೋದಂತೂ ನಿಜ.

ಇದೇ ಕಾರಣಕ್ಕಾಗಿ ಕರ್ರಿ ಮೇಲಿನ ಎಣ್ಣೆಯನ್ನು ತೆಗೆಯುವ ಹೊಸ ಐಡಿಯಾವೊಂದು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.

ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಟ್ವಿಟರ್​ನಲ್ಲಿ ವ್ಯಾಪಕವಾಗಿ ಶೇರ್​ ಮಾಡಲಾಗ್ತಿದೆ. ಈ ವಿಡಿಯೋದಲ್ಲಿ ಮಂಜುಗಡ್ಡೆಯ ಸಹಾಯದಿಂದ ಎಣ್ಣೆಯನ್ನು ತೆಗೆಯುತ್ತಿರೋದನ್ನ ಕಾಣಬಹುದಾಗಿದೆ. ಎಣ್ಣೆಯನ್ನು ತೆಗೆಯಲು ಮಂಜುಗಡ್ಡೆ ಬಳಸಲಾಗಿದೆ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ.

— Time For Knowledge (24×7) (@24hrknowledge) August 18, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...