alex Certify ʼಕೊರೊನಾʼದಿಂದ ರಕ್ಷಣೆ ಪಡೆಯಲು ಮಕ್ಕಳಿಗೆ ಕಲಿಸಿ ಈ ಪಾಠ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼದಿಂದ ರಕ್ಷಣೆ ಪಡೆಯಲು ಮಕ್ಕಳಿಗೆ ಕಲಿಸಿ ಈ ಪಾಠ

ಕೊರೊನಾ ಮೂರನೇ ಅಲೆ ಆಗಸ್ಟ್ ನಲ್ಲಿ ಬರಲಿದೆ ಎಂಬ ತಜ್ಞರ ಹೇಳಿಕೆ ಎಲ್ಲರನ್ನೂ ಜಾಗೃತಗೊಳಿಸಿದೆ. ಈ ಬಾರಿ ಮಕ್ಕಳು ಹೆಚ್ಚು ಪೀಡಿತರಾಗಲಿದ್ದಾರೆಂದು ಆರೋಗ್ಯ ತಜ್ಞರಿಂದ ಮಾಹಿತಿ ಸಿಕ್ಕಿದೆ. ಮಕ್ಕಳನ್ನು ಕೊರೊನಾದಿಂದ ರಕ್ಷಿಸುವುದು ಹೇಗೆ ಎಂಬ ಆತಂಕ ಪಾಲಕರನ್ನು ಕಾಡಲು ಶುರುವಾಗಿದೆ. ಮಕ್ಕಳಿಗೆ ಕೆಲವೊಂದು ವಿಷ್ಯಗಳನ್ನು ಪಾಲಕರು ಕಲಿಸಬೇಕಾಗುತ್ತದೆ. ಆ ಮೂಲಕ ಮಕ್ಕಳನ್ನು ಕೊರೊನಾದಿಂದ ರಕ್ಷಿಸುವ ಪ್ರಯತ್ನ ಮಾಡಬಹುದು.

ಮಕ್ಕಳು ಮನೆಯಿಂದ ಹೊರ ಬೀಳುವ ಸಂದರ್ಭದಲ್ಲಿ ಸರಿಯಾಗಿ ಮಾಸ್ಕ್ ಹಾಕಿಕೊಳ್ಳುವಂತೆ ಸಲಹೆ ನೀಡಿ. ಜನರು ಓಡಾಡುವ ಪ್ರದೇಶದಲ್ಲಿ ಯಾವುದೇ ವಸ್ತುವನ್ನು ಸ್ಪರ್ಶಿಸದಂತೆ ನೋಡಿಕೊಳ್ಳಿ. ಮಕ್ಕಳಿಗೆ ಸ್ಯಾನಿಟೈಜರ್ ಮಹತ್ವ ತಿಳಿಸಿ. ಮಕ್ಕಳು ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಸ್ಯಾನಿಟೈಜರ್ ಹಾಕಿ.

ಮನೆಗೆ ಬರ್ತಿದ್ದಂತೆ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವಂತೆ ಹೇಳಿ. ಕೆಮ್ಮು, ಸೀನು ಬಂದಾಗ ಮೂಗು ಮುಚ್ಚಿಕೊಳ್ಳುವುದನ್ನು ಮಕ್ಕಳಿಗೆ ಕಲಿಸಿ. ನಂತ್ರ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವಂತೆ ಸಲಹೆ ನೀಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಿ. ಸೋಂಕಿತ ಜನರೊಂದಿಗೆ ನೇರ ಸಂಪರ್ಕವನ್ನು ತಪ್ಪಿಸಿ. ಅನವಶ್ಯಕವಾಗಿ ಮಕ್ಕಳ ಜೊತೆ ಸುತ್ತಾಡಬೇಡಿ. ಮಕ್ಕಳಿಗೆ ಕೊರೊನಾ ಬಗ್ಗೆ ಸರಿಯಾದ ಮಾಹಿತಿ ನೀಡಿ. ಅವರನ್ನು ಅವರು ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ನೀಡಿ. ನಿಯಮಿತವಾಗಿ ಆಟ, ವ್ಯಾಯಾಮ ಮುಂದುವರೆಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...