alex Certify ಷೋ ಕೊಡಲು ಹೋಗಿ ನಗೆಪಾಟಲಿಗೀಡಾದ ಯುವತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಷೋ ಕೊಡಲು ಹೋಗಿ ನಗೆಪಾಟಲಿಗೀಡಾದ ಯುವತಿ…!

ಜನರ ಕಣ್ಣಲ್ಲಿ ಒಮ್ಮೆ ಸೆಲೆಬ್ರಿಟಿಗಳಂತೆ ಕಾಣಿಸಿದ್ರೆ ಮುಗೀತು. ನೀವು ಏನೇ ಮಾಡಿದರು ಅದು ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿಬಿಡುತ್ತೆ. ಅದೇ ರೀತಿ ವಿಮಾನದ ಬ್ಯುಸಿನೆಸ್​ ಕ್ಲಾಸ್​ನಲ್ಲಿ ಫೊಟೋ ತೆಗೆದು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದ ಇನ್​ಫ್ಲ್ಯೂಯೆನ್ಸರ್ ಒಬ್ಬಾಕೆ ಇದೀಗ ಮುಜುಗರ ಎದುರಿಸುತ್ತಿದ್ದಾಳೆ.

ಫ್ರಾನ್ಸ್​ನ 27 ವರ್ಷದ ಓಷಿಯನ್​ ಎಲ್​ ಹಿಮರ್​ ಎಂಬಾಕೆ ಇನ್​ಸ್ಟಾಗ್ರಾಂನಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾಳೆ. ವಿಮಾನದಲ್ಲಿ ಸಾಮಾನ್ಯ ಸೀಟನ್ನು ಬುಕ್ ಮಾಡಿದ ಈಕೆ ಬ್ಯುಸಿನೆಸ್​ ಕ್ಲಾಸ್​ ವಿಭಾಗದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಆ ಫೋಟೊವನ್ನ ಶೇರ್ ಮಾಡಿದ್ದಳು.

ಆದರೆ ಕತೆ ಇಲ್ಲಿಗೆ ಮುಗಿಯಲಿಲ್ಲ. ಈಕೆ ಸಾಮಾನ್ಯ ದರ್ಜೆಯ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿರುವ ಫೋಟೋವನ್ನ ಅಭಿಮಾನಿಯೊಬ್ಬ ಕ್ಲಿಕ್ಕಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಎರಡೂ ಫೋಟೋಗಳಲ್ಲಿ ಈಕೆ ಒಂದೇ ಡ್ರೆಸ್​ ಧರಿಸಿರೋದ್ರಿಂದ ಈಕೆಯ ಕಳ್ಳಾಟ ಅಭಿಮಾನಿಗಳ ಎದುರು ಬಟಾಬಯಲಾಗಿದೆ. ನೆಟ್ಟಿಗರು ಇದೀಗ ಈಕೆಯ ಕಾಲನ್ನ ಸರಿಯಾಗೇ ಎಳೆಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...