alex Certify ಅಫ್ಘಾನಿಸ್ತಾನದಿಂದ ಭಾರತಕ್ಕೆ ಮರಳಿದ ಮಗುವನ್ನು ಮುದ್ದಾಡಿದ ಬಾಲಕಿ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಫ್ಘಾನಿಸ್ತಾನದಿಂದ ಭಾರತಕ್ಕೆ ಮರಳಿದ ಮಗುವನ್ನು ಮುದ್ದಾಡಿದ ಬಾಲಕಿ: ವಿಡಿಯೋ ವೈರಲ್

ದೆಹಲಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಐಎಎಫ್ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ. ಈ ವೇಳೆ ಮಗುವನ್ನು ಹುಡುಗಿಯೊಬ್ಬಳು ಮುದ್ದಾಡಿದ ಮನಕಲಕುವ ದೃಶ್ಯ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.

ಹೌದು, 168 ಜನರನ್ನು ಹೊತ್ತ ಭಾರತೀಯ ವಾಯುಪಡೆಯು ಕಾಬೂಲ್ ನಿಂದ ದೆಹಲಿ ಸಮೀಪದ ಹಿಂಡನ್ ವಾಯುನೆಲೆಯಲ್ಲಿ ಇಳಿದಿದೆ. ಈ ವೇಳೆ ಪಾಸ್ ಪೋರ್ಟ್ ಇಲ್ಲದ ಮಗುವನ್ನು ಕೂಡ ಕರೆತರಲಾಗಿದೆ.

ದಿಢೀರನೇ ಮಾಡಿ ರವಾ ಬರ್ಫಿ

ಟ್ವಿಟ್ಟರ್ ನಲ್ಲಿ ಎ ಎನ್ ಐ ವಿಡಿಯೋ ಹಂಚಿಕೊಂಡಿದ್ದು, ತಾಯಿಯ ತೋಳಿನಲ್ಲಿ ಬಂಧಿಯಾಗಿದ್ದ ಪುಟ್ಟ ಮಗುವನ್ನು ಬಾಲಕಿಯೊಬ್ಬಳು ಸಂತೋಷದಿಂದ ಅಪ್ಪಿ, ಮುದ್ದಾಡಿದ್ದಾಳೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.

“ಅಪ್ಘಾನಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಹದಗೆಡುತ್ತಿದೆ. ಹೀಗಾಗಿ ನಾನು ನನ್ನ ಮಗಳು ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ಇಲ್ಲಿಗೆ ಬಂದೆವು. ಭಾರತೀಯ ಸಹೋದರ-ಸಹೋದರಿಯರು ನಮ್ಮ ರಕ್ಷಣೆಗೆ ಬಂದರು. ತಾಲಿಬಾನ್ ನಮ್ಮ ಮನೆಯನ್ನು ಸುಟ್ಟು ಹಾಕಿದರು. ಸಹಾಯ ಮಾಡಿದ್ದಕ್ಕಾಗಿ ಭಾರತಕ್ಕೆ ಧನ್ಯವಾದ” ಎಂದು ಸ್ಥಳಾಂತರವಾದ ವ್ಯಕ್ತಿಯೊಬ್ಬರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...