alex Certify ʼಚಿನ್ನʼದ ಹುಡುಗನಿಗೆ ಒಂದು ವರ್ಷ ಉಚಿತ ಪ್ರಯಾಣದ ಆಫರ್‌ ಕೊಟ್ಟ ಇಂಡಿಗೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಚಿನ್ನʼದ ಹುಡುಗನಿಗೆ ಒಂದು ವರ್ಷ ಉಚಿತ ಪ್ರಯಾಣದ ಆಫರ್‌ ಕೊಟ್ಟ ಇಂಡಿಗೋ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾಗೆ ಉಡುಗೊರೆಗಳ ಸುರಿಮಳೆಯೇ ಹರಿದುಬರುತ್ತಿದೆ.

ದೇಶದ ಮುಂಚೂಣಿ ವಾಯುಯಾನ ಸೇವಾದಾರ ಇಂಡಿಗೋ ಏರ್‌ ತನ್ನ ವಿಮಾನಗಳಲ್ಲಿ ನೀರಜ್‌ ಚೋಪ್ರಾಗೆ ಒಂದು ವರ್ಷದ ಅವಧಿಗೆ ಉಚಿತ ಪ್ರಯಾಣ ಮಾಡುವ ಅವಕಾಶ ಕಲ್ಪಿಸಿದೆ. ಆಗಸ್ಟ್‌ 8, 2021ರಿಂದ ಆಗಸ್ಟ್‌ 7, 2022 ರ ವರೆಗೂ ನೀರಜ್ ಇಂಡಿಗೋ ವಿಮಾನಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

SHOCKING: ಮಹಿಳಾ ಪೊಲೀಸ್ ಗೆ ಮತ್ತು ಬರಿಸಿ ಸಬ್ ಇನ್ಸ್ ಪೆಕ್ಟರ್ ಅತ್ಯಾಚಾರ, ಅಶ್ಲೀಲ ಫೋಟೋ ತೆಗೆದು ಬ್ಲಾಕ್‌ಮೇಲ್

“ನೀರಜ್, ನಿಮ್ಮ ಅಸಾಧಾರಣ ಸಾಧನೆಯ ಬಗ್ಗೆ ಕೇಳಿ ನಮಗೆಲ್ಲಾ ರೋಮಾಂಚನವಾಗಿದೆ. ನೀವು ನಮ್ಮ ದೇಶಕ್ಕೆ ಕೀರ್ತಿ ತಂದಿದ್ದೀರಿ. ನಿಮ್ಮನ್ನು ನಮ್ಮ ವಿಮಾನಕ್ಕೆ ಸ್ವಾಗತಿಸಲು ಇಂಡಿಗೋದ ಎಲ್ಲಾ ಸಿಬ್ಬಂದಿಗೂ ಹೆಮ್ಮೆ ಎನಿಸುತ್ತದೆ. ಒಂದು ವರ್ಷದ ಮಟ್ಟಿಗೆ ನಮ್ಮ ವಿಮಾನಗಳಲ್ಲಿ ಉಚಿತವಾಗಿ ಪ್ರಯಾಣಿಸಲು ನಿಮಗೆ ಅವಕಾಶ ಕೊಡಲು ನಮಗೆ ಸಂತಸವಾಗುತ್ತದೆ” ಎಂದು ಇಂಡಿಗೋದ ನಿದೇರ್ಶಕ ಹಾಗೂ ಸಿಇಓ ರೋನೊಜಯ್ ದತ್ತಾ ಘೋಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...